alex Certify 13ನೇ ವಯಸ್ಸಿನಿಂದ್ಲೇ ಇಂಥಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಪ್ರಿಯಾಂಕಾ ಛೋಪ್ರಾ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13ನೇ ವಯಸ್ಸಿನಿಂದ್ಲೇ ಇಂಥಾ ಕಾಯಿಲೆಯಿಂದ ಬಳಲುತ್ತಿದ್ದಾರೆ ಪ್ರಿಯಾಂಕಾ ಛೋಪ್ರಾ ಪತಿ….!

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್‌ ಜೋನಾಸ್‌ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರ್ತಾರೆ. ಪ್ರಿಯಾಂಕಾ ಜೊತೆಗೆ ವಿವಾಹಕ್ಕೂ ಮುನ್ನ ನಿಕ್‌ಗೆ ಸಾಕಷ್ಟು ಗರ್ಲ್‌ ಫ್ರೆಂಡ್ಸ್‌ ಇದ್ದರು ಅನ್ನೋ ವಿಚಾರವೂ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ನಿಕ್‌ ಬಗ್ಗೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಅಮೆರಿಕದ ಈ ಪ್ರಸಿದ್ಧ ಗಾಯಕ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. 13 ವರ್ಷದವರಿದ್ದಾಗ್ಲೇ ಈ ಕಾಯಿಲೆ ನಿಕ್‌ ಜೋನಾಸ್‌ರನ್ನು ಆವರಿಸಿಕೊಂಡಿದೆ. ಖುದ್ದು ನಿಕ್‌ ಜೋನಾಸ್‌ ಈ ಬಗ್ಗೆ ವಿಡಿಯೋ ಒಂದರಲ್ಲಿ ಹೇಳಿಕೊಂಡಿದ್ದಾರೆ. ನಿಕ್‌ಗೆ ಟೈಪ್‌ 1 ಡಯಾಬಿಟಿಸ್‌ ಇದೆ. ಈ ರೋಗದ ಆರಂಭಿಕ ಲಕ್ಷಣಗಳನ್ನು ಕೂಡ ಅವರು ವಿವರಿಸಿದ್ದಾರೆ. ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವಾಗಿರೋದ್ರಿಂದ ನಿಕ್‌, ತಮಗಾದ ಅನುಭವ, ರೋಗ ಲಕ್ಷಣಗಳು ಇವನ್ನೆಲ್ಲ ಹಂಚಿಕೊಂಡಿದ್ದಾರೆ

ಸದ್ಯ ನಿಕ್‌ ಜೋನಾಸ್‌ಗೆ 30 ವರ್ಷ. ಟೈಪ್‌1 ಡಯಾಬಿಟಿಸ್‌ಗೆ ಅವರು ತುತ್ತಾದಾಗ ಕೇವಲ 13 ವರ್ಷಗಳಾಗಿತ್ತು. ತೂಕ ನಷ್ಟ, ಅತಿಯಾದ ಬಾಯಾರಿಕೆ, ಕಿರಿಕಿರಿ ಮತ್ತು ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು ಈ ರೀತಿಯ ಲಕ್ಷಣಗಳು ಆರಂಭದಲ್ಲಿ ನಿಕ್‌ ಜೋನಾಸ್‌ಗೆ ಕಾಣಿಸಿಕೊಂಡಿದ್ದವು. ಈ ರೀತಿಯ ಸಮಸ್ಯೆಗಳೇನಾದರೂ ಇದ್ದಲ್ಲಿ ಕೂಡಲೇ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಅನ್ನೋದು ಅವರ ಎಚ್ಚರಿಕೆಯ ಸಂದೇಶ.

2018ರಲ್ಲಿ ನಿಕ್‌ ಜೋನಸ್‌, ಪ್ರಿಯಾಂಕಾ ಚೋಪ್ರಾರನ್ನು ಮದುವೆಯಾಗಿದ್ದಾರೆ. ಪಿಸಿ ಮತ್ತು ನಿಕ್ಗೆ ಜಾಲತಾಣಗಳಲ್ಲಿಯೂ ಸಾಕಷ್ಟು ಅಭಿಮಾನಿ ಬಳಗವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...