ಕೇಂದ್ರ ಕಾಶ್ಮೀರದ ಬುಡ್ಗಾಂ ಜಿಲ್ಲೆಯಲ್ಲಿ ದುರ್ಗಾಮಾತೆಯ 1200 ವರ್ಷಗಳಷ್ಟು ಹಳೆಯದಾದ ಮೂರ್ತಿಯೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಕ್ಕಾ ಮಾಹಿತಿ ಆಧರಿಸಿ, ಇಲ್ಲಿನ ಖಾನ್ ಸಹಾಬ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪ್ರಾಚ್ಯ ವಸ್ತು ಇಲಾಖೆ ಹಾಗೂ ಪೊಲೀಸರಿಗೆ ಈ ಪ್ರಾಚೀನ ವಿಗ್ರಹ ಸಿಕ್ಕಿದೆ.
`ಪಾನಿ ಪುರಿ’ ವಿಷ್ಯಕ್ಕೆ ಪತಿ-ಪತ್ನಿ ಮಧ್ಯೆ ನಡೀತು ಜಗಳ, ಕೊನೆಯಲ್ಲಿ ಪತ್ನಿ ಮಾಡಿದ್ದೇನು….?
“ಈ ವಿಗ್ರಹವು 7-8ನೇ ಶತಮಾನಕ್ಕೆ ಸೇರಿದ್ದೆಂದು ಪರಿಶೀಲನೆ ವೇಳೆ ತಿಳಿದುಬಂದಿದೆ. ವಿಗ್ರಹವು 12×8 ಇಂಚು ಗಾತ್ರವಿದ್ದು, ಸಿಂಹಾಸನದ ಮೇಲೆ ತನ್ನ ಸಹಾಯಕರೊಂದಿಗೆ ದುರ್ಗಾಮಾತೆ ಕುಳಿತಿರುವಂತೆ ಕಪ್ಪುಶಿಲೆಯಲ್ಲಿ ಕೆತ್ತಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ವಿಗ್ರಹವನ್ನು ಜಮ್ಮು & ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಪ್ರಾಚ್ಯವಸ್ತು ಇಲಾಖೆಗೆ ಹಸ್ತಾಂತರಿಸಲಾಗಿದೆ.