alex Certify ಕಾಂಗ್ರೆಸ್ ​ಗೆ ಮತ್ತೊಂದು ಬಿಗ್ ​ಶಾಕ್​: 11 ಮಂದಿ ‘ಕೈ’ ಶಾಸಕರು ಟಿಎಂಸಿ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಂಗ್ರೆಸ್ ​ಗೆ ಮತ್ತೊಂದು ಬಿಗ್ ​ಶಾಕ್​: 11 ಮಂದಿ ‘ಕೈ’ ಶಾಸಕರು ಟಿಎಂಸಿ ಸೇರ್ಪಡೆ

ಮೇಘಾಲಯದಲ್ಲಿರುವ 17 ಕಾಂಗ್ರೆಸ್​ ಶಾಸಕರ ಪೈಕಿ ಮಾಜಿ ಸಿಎಂ ಮುಕುಲ್​ ಸಂಗ್ಮಾ ಸೇರಿದಂತೆ 11 ಮಂದಿ ಶಾಸಕರು ತೃಣಮೂಲ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದು, ಕಾಂಗ್ರೆಸ್​​ಗೆ ಬಿಗ್​ ಶಾಕ್​ ಎದುರಾದಂತಾಗಿದೆ.

ಈ ಮೂಲಕ ಪಶ್ಚಿಮ ಬಂಗಾಳದ ಆಢಳಿತಾರೂಢ ತೃಣಮೂಲ ಕಾಂಗ್ರೆಸ್​​ಗೆ ಮೇಘಾಲಯದಲ್ಲಿ ದೊಡ್ಡ ಮುನ್ನಡೆ ಸಿಕ್ಕಂತಾಗಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಮೇಘಾಲಯ ವಿಧಾನಸಭಾ ಸ್ಪೀಕರ್​​ ಮೆಟ್ಬಾ ಲಿಂಗೋಹ್​​​ರಿಗೆ ಕಾಂಗ್ರೆಸ್​​ ಶಾಸಕರು ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಕಾಂಗ್ರೆಸ್​ ನಾಯಕರಾದ ಕೀರ್ತಿ ಆಜಾದ್​ ಹಾಗೂ ಅಶೋಕ್​ ತನ್ವಾರ್ ಹಾಗೂ ಜನತಾ ದಳ(ಯುನೈಟೆಡ್​)ದ ಮಾಜಿ ನಾಯಕ​​ ಪವನ್​ ವರ್ಮಾ ದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್​ ಬಾವುಟ ಹಿಡಿದ ಒಂದು ದಿನದ ಬಳಿಕ ಈ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಇಂದು ದೆಹಲಿಗೆ ಭೇಟಿ ನೀಡಲಿದ್ದಾರೆ.

ಈ ಬೆಳವಣಿಗೆ ನಡೆಯುವ ಕೆಲವೇ ಗಂಟೆಗಳ ಮುನ್ನ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ಟಿಎಂಸಿಯ ಹೋರಾಟದಲ್ಲಿ ಯಾರ್ಯಾರು ಟಿಎಂಸಿ ಸೇರಲು ಬಯಸುತ್ತಾರೋ ಅವರಿಗೆ ನಮ್ಮ ಪಕ್ಷವು ಸ್ವಾಗತಿಸುತ್ತದೆ ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...