alex Certify 12 ವರ್ಷಗಳ ಹಿಂದೆ ಉಚಿತ ಕಡಲೆಕಾಯಿ ನೀಡಿದ್ದ ಮಾರಾಟಗಾರನ ಸಾಲ ತೀರಿಸಲು ಅಮೆರಿಕಾದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ವರ್ಷಗಳ ಹಿಂದೆ ಉಚಿತ ಕಡಲೆಕಾಯಿ ನೀಡಿದ್ದ ಮಾರಾಟಗಾರನ ಸಾಲ ತೀರಿಸಲು ಅಮೆರಿಕಾದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ..!

ಕಾಕಿನಾಡ: ದಯೆ ಮತ್ತು ಸಹಾನುಭೂತಿ, ಸದ್ಗುಣಗಳನ್ನು ಹೊಂದಿರುವವರು ನಿಜವಾಗಿಯೂ ಮಾನವೀಯ ಮೌಲ್ಯವನ್ನು ಹೊಂದಿರುತ್ತಾರೆ. ಅಂಥವರಿಂದಾಗಿ ಎಲ್ಲೋ ಕೆಲವೆಡೆ ಮಾನವೀಯತೆ ಇನ್ನೂ ಇದೆ ಅಂತಾ ಹೇಳಬಹುದು. ಹಾಗೆಯೇ ಇಲ್ಲೊಂದೆಡೆ ನಡೆದಿರೋ ಘಟನೆ ಕೇಳಿದ್ರೆ ಖಂಡಿತಾ ನಿಮಗೆ ರೋಮಾಂಚನವಾಗದೆ ಇರಲಾರದು.

ಹೌದು, ಆಂಧ್ರಪ್ರದೇಶದಲ್ಲಿ ಕಡಲೆಕಾಯಿ ಮಾರಾಟಗಾರರೊಬ್ಬರನ್ನು ಪತ್ತೆಹಚ್ಚಲು ಅಣ್ಣ-ತಂಗಿ ಅಮೆರಿಕಾದಿಂದ ಭಾರತಕ್ಕೆ ಮರಳಿದ್ದಾರೆ. ಇದು ಸುಮಾರು 12 ವರ್ಷಗಳ ಹಿಂದೆ ನಡೆದಿರುವ ಘಟನೆ. ನೇಮಾನಿ ಪ್ರಣವ್ ಮತ್ತು ಅವರ ಸಹೋದರಿ ಸುಚಿತಾ 2010 ರಲ್ಲಿ ತಮ್ಮ ತಂದೆ ಮೋಹನ್ ಅವರೊಂದಿಗೆ ಆಂಧ್ರಪ್ರದೇಶದ ಕೊತಪಲ್ಲಿ ಬೀಚ್‌ಗೆ ಭೇಟಿ ನೀಡಿದ್ದರು.

ಈ ವೇಳೆ ಅವರು ಗಿಂಜಾಳ ಪೆದ್ದ ಸತ್ಯಯ್ಯ ಎಂಬ ಮಾರಾಟಗಾರರಿಂದ ಕಡಲೆಕಾಯಿಯನ್ನು ಖರೀದಿಸಿದ್ದಾರೆ. ಇನ್ನೇನು ಹಣ ಕೊಡಬೇಕೆಂದು ಜೇಬು ತಡಕಾಡಿದಾಗ, ಪರ್ಸ್ ಮರೆತು ಬಂದಿರುವುದು ತಿಳಿದಿದೆ. ಈ ವೇಳೆ ಸತ್ಯಯ್ಯ ಅವರು ಹೋಗಲಿ ಬಿಡಿ, ಉಚಿತವಾಗಿ ತಿನ್ನುವಿರಂತೆ ಎಂದು ಮನಸಾರೆ ಹೇಳಿದ್ದಾರೆ. ಆದರೆ ಈ ಸಹೋದರ ಹಾಗೂ ಸಹೋದರಿ ತಾವು ಹಣ ಕೊಡುವುದಾಗಿ ಭರವಸೆ ನೀಡಿ, ತಮ್ಮ ಕ್ಯಾಮರಾದಲ್ಲಿ ಸತ್ಯಯ್ಯ ಅವರ ಫೋಟೋ ಕ್ಲಿಕ್ಕಿಸಿದ್ದಾರೆ.

ಈ ಒಡಹುಟ್ಟಿದವರು ಅಮೆರಿಕಾದಲ್ಲಿ ವಾಸಿಸುವ ಎನ್‌ಆರ್‌ಐಗಳಾಗಿರುವುದರಿಂದ ಅವರಿಗೆ ಶೀಘ್ರದಲ್ಲೇ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ತಮ್ಮ ಪ್ರಯಾಣದ ನಂತರ ಅಲ್ಲಿಗೆ ಹಿಂತಿರುಗಿದ್ದರು.

ಈಗ, ಸುಮಾರು 12 ವರ್ಷಗಳ ನಂತರ, ನೇಮಾನಿ ಮತ್ತು ಅವಳ ಸಹೋದರಿ ಸುಚಿತಾ ಭಾರತಕ್ಕೆ ಹಿಂತಿರುಗಿದ್ದಾರೆ. ಸತ್ಯಯ್ಯ ಅವರನ್ನು ಪತ್ತೆಹಚ್ಚಲು ಶತಪ್ರಯತ್ನ ನಡೆಸಿದ ಇವರು ಕೊನೆಗೆ ಕಾಕಿನಡ ಶಾಸಕರ ಮೊರೆ ಹೋಗಿದ್ದಾರೆ. ಕೊನೆಗೆ ಸತ್ಯಯ್ಯ ಅವರ ಕುಟುಂಬವನ್ನು ಪತ್ತೆ ಹಚ್ಚಿದ್ದು, ಈ ವೇಳೆ ಸತ್ಯಯ್ಯ ಈಗಾಗಲೇ ನಿಧನರಾಗಿರುವ ಸುದ್ದಿ ತಿಳಿದಿದೆ. ಇದರಿಂದ ಬೇಸರಗೊಂಡ ಅಣ್ಣ-ತಂಗಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಕಡಲೆ ಸಾಲ ತೀರಿಸಲು ಅವರ ಕುಟುಂಬಕ್ಕೆ 25,000 ರೂ.ಗಳನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...