alex Certify 100 ಮಿಲಿಯನ್ ವೀಕ್ಷಣೆ ಪಡೆದ ‘RRR’ ಟ್ರೈಲರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ಮಿಲಿಯನ್ ವೀಕ್ಷಣೆ ಪಡೆದ ‘RRR’ ಟ್ರೈಲರ್

ಕರ್ನಾಟಕದಲ್ಲೂ ಸಾಕಷ್ಟು ಸದ್ದು ಮಾಡುತ್ತಿರುವ ‘ಆರ್ ಆರ್ ಆರ್’ ಹಾಗೂ ‘ಪುಷ್ಪ’ ಚಿತ್ರದ ಟ್ರೈಲರ್ ಗಳು ಯುಟ್ಯೂಬ್ ನಲ್ಲಿ ದಾಖಲೆ ಬರೆಯುತ್ತಿವೆ.

ರಾಜಮೌಳಿ ನಿರ್ದೇಶನದ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ  ‘ಆರ್ ಆರ್ ಆರ್’ ಸಿನಿಮಾ ಟ್ರೈಲರ್ ಅನ್ನು ಯುಟ್ಯೂಬ್ ನಲ್ಲಿ 1 ವಾರದ ಹಿಂದೆ 5 ಭಾಷೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಎಲ್ಲಾ ಭಾಷೆಯಲ್ಲಿ ಸೇರಿ ಈ ಟ್ರೈಲರ್ ಇದೀಗ 100 ಮಿಲಿಯನ್ ವೀಕ್ಷಣೆ ಪಡೆದಿದೆ.

ಜನವರಿ 7ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಜ್ಯೂ ಎನ್ಟಿಆರ್ ಹಾಗೂ ರಾಮ್ ಚರಣ್ ಸೇರಿದಂತೆ ಅಲಿಯಾ ಭಟ್, ಅಜಯ್ ದೇವಗನ್ ಶ್ರಿಯಾ ಸರನ್, ರಾಯ್ ಸ್ಟೀವನ್ ಸನ್, ಒಲಿವಿಯಾ ಮೊರಿಸ್ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಡಿವಿವಿ ದಾನಯ್ಯ ತಮ್ಮ ಡಿವಿವಿ ಎಂಟರ್ಟೇನ್ಮೆಂಟ್ಸ್ ಬ್ಯಾನರ್ ನಡಿ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Rajamouli's RRR trailer creates a new record | 123telugu.com

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...