alex Certify ಸಂದರ್ಶನದಲ್ಲಿ ಸುಶಾಂತ್‌ ಕುರಿತು ರಿಯಾ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂದರ್ಶನದಲ್ಲಿ ಸುಶಾಂತ್‌ ಕುರಿತು ರಿಯಾ ಹೇಳಿದ್ದೇನು ಗೊತ್ತಾ…?

Sushant Singh Rajput death anninversary | 10 shocking claims Rhea Chakraborty had made about Sushant Singh Rajput in her first interview after his death

ಕಳೆದ ವರ್ಷ ಜೂನ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವನ್ನಪ್ಪಿದ್ದು ಕಂಡು ಬಂದ ಮೇಲೆ ನಟಿ ರಿಯಾ ಚಕ್ರಬೊರ್ತಿ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಸುಶಾಂತ್‌ ತಂದೆ ದೂರು ಕೊಟ್ಟಿದ್ದರು. ಸುಶಾಂತ್‌ಗೆ ಕೋಟ್ಯಾಂತರ ರೂಪಾಯಿ ವಂಚಿಸಿದ್ದಲ್ಲದೇ ಆತನ ಆತ್ಮಹತ್ಯೆಗೆ ಪ್ರೇರಣೆ ಕೊಟ್ಟ ಆಪಾದನೆ ಮೇಲೆ ರಿಯಾ ಬಹಳಷ್ಟು ಟೀಕೆಗೆ ಗುರಿಯಾಗಿದ್ದರು.

ಕೆಲ ದಿನಗಳ ಮಟ್ಟಿಗೆ ಸುಮ್ಮನಿದ್ದ ರಿಯಾ ಕಳೆದ ವರ್ಷದ ಆಗಸ್ಟ್‌ನಲ್ಲಿ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ, ತಮ್ಮ ಹಾಗೂ ಸುಶಾಂತ್‌‌ ನಡುವಿನ ಸಂಬಂಧದ ಕುರಿತಂತೆ ಬಹಳಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.

“ದಿವಂಗತರಾಗಿದ್ದ ತಮ್ಮ ತಾಯಿಯನ್ನು ಸುಶಾಂತ್‌ ಬಹಳ ಪ್ರೀತಿಸುತ್ತಿದ್ದರು. ಅವರ ತಾಯಿಯನ್ನು ಬಿಟ್ಟು ಇರಲು ಕಷ್ಟಪಡುತ್ತಿದ್ದದ್ದೇ ಸುಶಾಂತ್‌ ಖಿನ್ನತೆಗೆ ಒಳಗಾಗಲು ಇದ್ದ ದೊಡ್ಡ ಕಾರಣ ಎಂದು ನನಗೆ ಅನಿಸುತ್ತದೆ. ಅವರೂ ಸಹ ಮಾನಸಿಕವಾಗಿ ಅಸ್ವಸ್ಥರಾಗಿದ್ದರು” ಎಂದು ರಿಯಾ ಈ ಸಂದರ್ಭದಲ್ಲಿ ತಿಳಿಸಿದ್ದರು.

ಪಾಕ್​ ಟಿವಿ ಸಿರೀಸ್​ನಲ್ಲಿ ರವೀಂದ್ರನಾಥ್​ ಠಾಗೂರ್ ಗೀತೆ..!

ಮುಂದುವರೆದು, “ಯೂರೋಪ್‌ಗೆ ತೆರಳುವ ಸಂದರ್ಭದಲ್ಲಿ, ವಿಮಾನದಲ್ಲಿ ಕುಳಿತಾಗ ನನಗೆ ಇಕ್ಕಟ್ಟಾದ ಜಾಗದಲ್ಲಿ ಕುಳಿತಾಗ ವಿಪರೀತ ಭಯವಾಗುತ್ತದೆ ಹಾಗೂ ಇದಕ್ಕಾಗಿ ತಾವು ಒಂದು ಮಾತ್ರೆ ತೆಗೆದುಕೊಳ್ಳುವುದಾಗಿ ಸುಶಾಂತ್‌‌ ನನಗೆ ಹಾಗೂ ಎಲ್ಲರಿಗೂ ತಿಳಿಸಿದ್ದರು” ಎಂದು ರಿಯಾ ಹೇಳಿಕೊಂಡಿದ್ದರು.

ಚಿತ್ರನಿರ್ಮಾಪಕ ಮಹೇಶ್‌ ಭಟ್‌ಗೂ ಸುಶಾಂತ್‌ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದ ರಿಯಾ, “ಮಹೇಶ್‌ ಭಟ್‌ ಜೊತೆಗಿನ ನನ್ನ ಮಾತುಕತೆಗೂ ಸುಶಾಂತ್‌‌ ಸಾವಿಗೂ ಯಾವುದೇ ಸಂಬಂಧವಿಲ್ಲ” ಎಂದು ತಿಳಿಸಿದ್ದಾರೆ.

ತೆರೆಗೆ ಬರಲಿದೆ ರೋಹಿಣಿ ಸಿಂಧೂರಿ ಸಾಧನೆ ಆಧರಿಸಿದ ‘ಭಾರತ ಸಿಂಧೂರಿ’ ಚಿತ್ರ

ಇದೇ ವೇಳೆ ತಾವು ಸುಶಾಂತ್‌ ರ ಹಾರ್ಡ್ ಡ್ರೈವ್‌ ಅನ್ನು ನಾಶಪಡಿಸಿದ್ದೇನೆ ಎಂಬ ಆಪಾದನೆ ಆಧಾರರಹಿತವಾದದ್ದು ಎಂದು ಹೇಳಿಕೊಂಡಿದ್ದರು ರಿಯಾ.

“ನನಗೆ ಗೊತ್ತಿರುವಂತೆ ಯಾವುದೇ ಹಾರ್ಡ್ ಡ್ರೈವ್ ಅಲ್ಲಿ ಇರಲಿಲ್ಲ. ನಾನು ಅಲ್ಲಿದ್ದ ವೇಳೆ ಯಾರೂ ಸಹ ಬಂದಿರಲಿಲ್ಲ. ನಾನು ಅಲ್ಲಿಂದ ಹೊರಟಾಗ ಅವರ ಸಹೋದರಿ ಯಾರನ್ನೋ ಕರೆದಿದ್ದರು, ಆದರೆ ನನಗೆ ಆ ಬಗ್ಗೆ ಗೊತ್ತಿಲ್ಲ” ಎಂದು ರಿಯಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...