alex Certify ಕ್ಯಾಸಿನೊಗೆ ಭಾರಿ ಬೆಂಕಿ ತಗುಲಿ 10 ಜನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಸಿನೊಗೆ ಭಾರಿ ಬೆಂಕಿ ತಗುಲಿ 10 ಜನ ಸಾವು

ಥಾಯ್ಲೆಂಡ್‌ನ ಗಡಿಯಲ್ಲಿರುವ ಕಾಂಬೋಡಿಯನ್ ಹೋಟೆಲ್ ಕ್ಯಾಸಿನೊದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ.

ಪೊಯಿಪೆಟ್‌ನಲ್ಲಿರುವ ಗ್ರ್ಯಾಂಡ್ ಡೈಮಂಡ್ ಸಿಟಿ ಹೋಟೆಲ್ ಕ್ಯಾಸಿನೊದಲ್ಲಿ ಬುಧವಾರ ಸ್ಥಳೀಯ ಕಾಲಮಾನ ರಾತ್ರಿ 11:30 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಪೊಲೀಸರ ಪ್ರಕಾರ ಬೆಂಕಿಯಲ್ಲಿ ಸುಮಾರು 30 ಜನರು ಗಾಯಗೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಬೃಹತ್ ಸಂಕೀರ್ಣಕ್ಕೆ ಬೆಂಕಿ ಆವರಿಸಿರುವುದು, ಉರಿಯುತ್ತಿರುವ ಕಟ್ಟಡದಿಂದ ಜನ ಜಿಗಿಯುವುದನ್ನು ಕಾಣಬಹುದು. ಗಾಯಗೊಂಡವರನ್ನು ಥೈಲ್ಯಾಂಡ್‌ನ ಸಾ ಕೆಯೊ ಪ್ರಾಂತ್ಯದ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ.

ಅಧಿಕಾರಿಗಳು ಥಾಯ್ ಕಡೆಯಿಂದ ಅಗ್ನಿಶಾಮಕ ವಾಹನಗಳನ್ನು ಕಳುಹಿಸುವ ಮೂಲಕ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಮೊದಲ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಬಹುಮಹಡಿ ಕಟ್ಟಡದ ಮೇಲಕ್ಕೆ ಹಾರಿದ ಕಾರ್ಪೆಟ್‌ ಗಳಿಂದ ಉದ್ದಕ್ಕೂ ಬೇಗನೆ ವ್ಯಾಪಿಸಿದೆ. ಥಾಯ್-ಕಾಂಬೋಡಿಯನ್ ಗಡಿಯುದ್ದಕ್ಕೂ ಇರುವ ಹಲವಾರು ಕ್ಯಾಸಿನೊ-ಹೋಟೆಲ್‌ಗಳಲ್ಲಿ ಗ್ರ್ಯಾಂಡ್ ಡೈಮಂಡ್ ಸಿಟಿ ಕೂಡ ಒಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...