alex Certify BIG NEWS: ಅಕ್ಟೋಬರ್​ನಿಂದ ಭಾರತದ ಮೊದಲ ಮಕ್ಕಳ ಕೊರೊನಾ ಲಸಿಕೆ ಜೈಕೋವ್​ – ಡಿ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಕ್ಟೋಬರ್​ನಿಂದ ಭಾರತದ ಮೊದಲ ಮಕ್ಕಳ ಕೊರೊನಾ ಲಸಿಕೆ ಜೈಕೋವ್​ – ಡಿ ಲಭ್ಯ

ಔಷಧಿ ತಯಾರಕ ಕಂಪನಿಯಾದ ಕ್ಯಾಡಿಲಾ ಹೆಲ್ತ್​ಕೇರ್​​ ಅಕ್ಟೋಬರ್​ ತಿಂಗಳಲ್ಲಿ 10 ಮಿಲಿಯನ್​ ಕೊರೊನಾ ವೈರಸ್​ ಲಸಿಕೆಯನ್ನು ಪೂರೈಸಲಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಜೈಡಸ್​ ಕ್ಯಾಡಿಲ್ಲಾದ ಸೂಜಿ ರಹಿತ ಕೊರೊನಾ ಲಸಿಕೆಯಾದ ಜೈಕೋವ್​ ಡಿ ಅಕ್ಟೋಬರ್​ ತಿಂಗಳ ಆರಂಭದಲ್ಲಿಯೇ ಸಿಗಲಿದೆ ಎಂದು ಅಂದಾಜಿಸಲಾಗಿದೆ.

12 ರಿಂದ 18 ವರ್ಷ ಪ್ರಾಯದೊಳಗಿನವರಿಗೆ ನೀಡಲು ಜೈಕೋವ್​ ಡಿ ಕೊರೊನಾ ಲಸಿಕೆಗೆ ಅನುಮೋದನೆ ನೀಡಲಾಗಿದೆ.

ಅಂದಹಾಗೆ ಈ ಲಸಿಕೆಯ ಬೆಲೆ ಇನ್ನೂ ನಿಗದಿಯಾಗಿಲ್ಲ. ಜೈಕೋವ್​ ಡಿಗೆ ಎಷ್ಟು ಬೆಲೆ ನಿಗದಿ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ರಾಷ್ಟ್ರೀಯ ಲಸಿಕೆ ಅಭಿಯಾನದಲ್ಲಿ ಈ ಲಸಿಕೆಯನ್ನೂ ಸೇರಿಸಿಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್​ ಹೇಳಿದ್ದಾರೆ.

ಜೈಕೋವ್​ ಡಿ ವಿಶ್ವದ ಮೊದಲ ಪ್ಲಾಸ್ಮಿಡ್​ ಡಿಎನ್​​ಎ ಕೊರೊನಾ ಲಸಿಕೆಯಾಗಿದೆ. ಇದೊಂದು ಮೂರು ಡೋಸ್​ಗಳ ಲಸಿಕೆಯಾಗಿದೆ. ಮೊದಲ ಲಸಿಕೆ ಪಡೆದ 28 ದಿನಗಳ ಬಳಿಕ 2ನೇ ಲಸಿಕೆ ಹಾಗೂ 56 ದಿನಗಳ ಬಳಿಕ 3ನೇ ಲಸಿಕೆಯನ್ನು ನೀಡಲಾಗುತ್ತದೆ. 12 ರಿಂದ 18 ವರ್ಷದ ಒಳಗಿನವರಿಗೆ ನೀಡಲು ಈ ಕೊರೊನಾ ಲಸಿಕೆಗೆ ಆಗಸ್ಟ್​ 20ರಂದು ಅನುಮೋದನೆ ದೊರಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...