alex Certify ಕಳವಳ ಹುಟ್ಟಿಸುತ್ತೆ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳವಳ ಹುಟ್ಟಿಸುತ್ತೆ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ

ಔಪಚಾರಿಕ ಹಾಗೂ ಅನೌಪಚಾರಿಕ ವಲಯಗಳ ಒಟ್ಟು 1.9 ಲಕ್ಷಕ್ಕೂ ಅಧಿಕ ಮಂದಿ ಆಗಸ್ಟ್​ ತಿಂಗಳಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರಾದ್ಯಂತ ನಿರುದ್ಯೋಗ ಪ್ರಮಾಣ ಮಿತಿಮೀರಿದೆ ಎಂದು ತಿಳಿದುಬಂದಿದೆ.

ಜುಲೈ ತಿಂಗಳಲ್ಲಿ 7 ಪ್ರತಿಶತ ಇದ್ದ ನಿರುದ್ಯೋಗ ಪ್ರಮಾಣವು ಆಗಸ್ಟ್ ತಿಂಗಳ ವೇಳೆ 8.3 ಪ್ರತಿಶತಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಈ ಮೂಲಕ ಜುಲೈವರೆಗೆ 37.5 ಪ್ರತಿಶತ ಇದ್ದ ಉದ್ಯೋಗ ದರವು ಆಗಸ್ಟ್​ ತಿಂಗಳ ವೇಳೆಗೆ 37.2 ಪ್ರತಿಶತಕ್ಕೆ ಇಳಿಕೆಯಾಗಿದೆ.

ಮುಖ್ಯವಾಗಿ ಕೃಷಿ ವಲಯದಲ್ಲಿ ಉದ್ಯೋಗಗಳಲ್ಲಿ ಅನಿಶ್ಚಿತತೆ ಕಂಡು ಬಂದಿದೆ. ಆಗಸ್ಟ್​ನಲ್ಲಿ ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪ್ರಮಾಣವು 8.7 ದಶಲಕ್ಷಕ್ಕೆ ಕುಸಿದಿದೆ. ವ್ಯಾಪಾರಿ ಕ್ಷೇತ್ರದಲ್ಲಿ ಉದ್ಯೋಗವು ಸುಮಾರು 4ಮಿಲಿಯನ್​ ಏರಿಕೆ ಕಂಡಿದೆ. ಸಣ್ಣ ವ್ಯಾಪಾರಿ ಮತ್ತು ದಿನಗೂಲಿ ಕಾರ್ಮಿಕರ ಸಂಖ್ಯೆಯು 2.1 ಮಿಲಿಯನ್ ಆಗಿದೆ. ವೇತನ ಉದ್ಯೋಗವು 0.7 ಮಿಲಿಯನ್​ನಷ್ಟು ಹೆಚ್ಚಾಗಿದೆ ಎಂದು ಸಿಎಂಐಇ ಹೇಳಿದೆ.

ಕೃಷಿ ವಲಯಗಳಲ್ಲಿ ಕೆಲಸ ಕಳೆದುಕೊಂಡ ವ್ಯಕ್ತಿಗಳು ಸೇವಾ ವಲಯದತ್ತ ಮುಖಮಾಡಿದ್ದಾರೆ. ಕೈಗಾರಿಕಾ ವಲಯದಲ್ಲೂ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದೆ. ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್​ ತಿಂಗಳಲ್ಲಿ ಉದ್ಯೋಗಿಗಳ ಸಂಖ್ಯೆಯು ಕ್ಷೀಣಿಸಿದ್ದು 2.5 ಮಿಲಿಯನ್​ ಆಗಿದೆ. ಇದನ್ನು ನೋಡಿದರೆ ಕಾರ್ಖಾನೆಗಳು ಉದ್ಯೋಗಿಗಳಿಗೆ ವಿಶ್ವಾಸಾರ್ಹ ಮೂಲವಲ್ಲ ಎಂದು ಸಿಎಂಐಇ ಅಭಿಪ್ರಾಯ ಪಟ್ಟಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...