alex Certify ಹೊಸ ಹಾಡಿಗೆ ನೃತ್ಯ ಮಾಡಿದ ಸಪ್ನಾ ಚೌಧರಿ: ವಿಡಿಯೋ ನೋಡಿ ಹುಚ್ಚೆದ್ದು ಕುಣಿದ ಅಭಿಮಾನಿಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಹಾಡಿಗೆ ನೃತ್ಯ ಮಾಡಿದ ಸಪ್ನಾ ಚೌಧರಿ: ವಿಡಿಯೋ ನೋಡಿ ಹುಚ್ಚೆದ್ದು ಕುಣಿದ ಅಭಿಮಾನಿಗಳು..!

ಬಿಗ್ ಬಾಸ್ ಖ್ಯಾತಿಯ ಮತ್ತು ಹರ್ಯಾನ್ವಿ ಡ್ಯಾನ್ಸರ್ ಸಪ್ನಾ ಚೌಧರಿ ಇತ್ತೀಚೆಗೆ ತನ್ನ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

ಹರಿಯಾಣದಲ್ಲಿ ಸಾವಿರಾರು ಅಭಿಮಾನಿಗಳ ಎದುರು ಸಪ್ನಾ ಚೌಧರಿ ಸೊಂಟ ಬಳುಕಿಸಿದ್ದಾರೆ. ವೇದಿಕೆಯಲ್ಲಿ ನೃತ್ಯ ಮಾಡುವಾಗ ಸಪ್ನಾ ಚೌಧರಿ ಪ್ರಕಾಶಮಾನವಾದ ಹಳದಿ ಪಟಿಯಾಲಾ-ಸಲ್ವಾರ್ ಸೂಟ್‌ ಧರಿಸಿದ್ದು ಅತ್ಯಂತ ಸುಂದರವಾಗಿ ಕಾಣುತ್ತಾರೆ.

ವಿಷು ಪುತಿಯವರ ಹೊಸದಾಗಿ ಬಿಡುಗಡೆಯಾದ ಮಿನಿಸ್ಟರ್ ಎಂಬ ಹರ್ಯಾನ್ವಿ ಹಾಡಿಗೆ ಅವರು ಪ್ರದರ್ಶನ ನೀಡುತ್ತಿದ್ದರು. ಸಪ್ನಾ ಅವರು ಮೊದಲಿಗೆ ನಿಧಾನವಾಗಿ ಹೆಜ್ಜೆ ಹಾಕಿದ್ದು, ನಂತರ ವೇದಿಕೆಯ ಮೇಲೆ ಹಿಂದಕ್ಕೆ ಮತ್ತು ಮುಂದಕ್ಕೆ ನಡೆಯುತ್ತಾ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

ಪ್ರೇಕ್ಷಕರು ಸಪ್ನಾ ಅವರ ಅಭಿನಯ ಮತ್ತು ಹೊಸ ಹಾಡನ್ನು ಆನಂದಿಸುತ್ತಿದ್ದಾರೆ. ಈ ವಿಡಿಯೋ ಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, 1.4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ನೆಟ್ಟಿಗರು ಸಪ್ನಾ ಅವರ ನೃತ್ಯ ಪ್ರದರ್ಶನವನ್ನು ಇಷ್ಟಪಟ್ಟಿದ್ದಾರೆ. ಹೃದಯ, ಕಣ್ಣು ಮತ್ತು ಬೆಂಕಿಯ ಎಮೋಜಿಗಳೊಂದಿಗೆ ವಿಡಿಯೋದ ಕಾಮೆಂಟ್‌ ಬಾಕ್ಸ್ ಅನ್ನು ತುಂಬಿದ್ದಾರೆ. ಹಳದಿ ಸೂಟ್‌ನಲ್ಲಿ ಸಪ್ನಾ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅಂದಹಾಗೆ ಸಪ್ನಾ ಚೌಧರಿ ಇನ್ಸ್ಟಾಗ್ರಾಂನಲ್ಲಿ 4.8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...