alex Certify ಹೊಸ ಬಟ್ಟೆ ಕೊಂಡು ತಂದ ನಂತರ ತೊಳೆಯದೆ ಬಳಸುತ್ತಿದ್ದೀರಾ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬಟ್ಟೆ ಕೊಂಡು ತಂದ ನಂತರ ತೊಳೆಯದೆ ಬಳಸುತ್ತಿದ್ದೀರಾ….!

ಹೊಸ ಡ್ರೆಸ್ ಶಾಪಿಂಗ್ ಮಾಡಿ ತಂದಾಕ್ಷಣ ಅಥವಾ ಮರುದಿನವೇ ಅದನ್ನು ಧರಿಸುವ ಅಭ್ಯಾಸವಿದ್ದರೆ ಇಂದೇ ಅದನ್ನು ಬದಲಾಯಿಸಿಕೊಳ್ಳಿ. ಏಕೆಂದರೆ ಒಗೆಯದೆ ಬಳಸುವ ಬಟ್ಟೆಯಿಂದ ನಿಮಗೆ ಹಲವು ರೋಗಗಳು ಅಂಟಿಕೊಳ್ಳಬಹುದು.

ಹೌದು, ಮಳಿಗೆಗಳಿಂದ ತಂದ ಉಡುಪನ್ನು ನೀರಿನಲ್ಲಿ ಅದ್ದಿ ಒಣಗಿಸದೆ ನೇರವಾಗಿ ಬಳಸುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾ ಅಥವಾ ವೈರಸ್ ನಿಮ್ಮ ಮೈಗೆ ಅಂಟಿಕೊಂಡು ತುರಿಕೆ ಅಥವಾ ಅಲರ್ಜಿಯಂಥ ಸಮಸ್ಯೆಗಳು ಕಾಣಿಸಿಕೊಂಡಾವು.

ಹೊಸ ಬಟ್ಟೆಗಳನ್ನು ಹೊಲಿಯುವ ವೇಳೆ ಅವುಗಳ ಅಳತೆ ತೆಗೆದುಕೊಳ್ಳುವಾಗ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅವುಗಳನ್ನು ನೆಲದ ಮೇಲೆ ಹಾಕಿರಬಹುದು. ಧೂಳು ಕೊಳೆ ಅಂಟಿಕೊಂಡಿರಬಹುದು. ಇವು ನಿಮ್ಮ ಮೈಗೆ ತಾಕಿದರೆ ಗುಳ್ಳೆ ಅಥವಾ ಇತರ ಕಜ್ಜಿಗಳು ಮೂಡಬಹುದು.

ನೀವು ಕೊಂಡಿರುವ ಬಟ್ಟೆಯನ್ನು ಹಲವರು ಟ್ರಯಲ್ ನೋಡಿರಬಹುದು. ಅವರ ಮೈಯ ಬೆವರು, ವಾಸನೆ ಮತ್ತು ಬ್ಯಾಕ್ಟೀರಿಯಾಗಳು ನಿಮ್ಮ ತ್ವಚೆಗೂ ಅಂಟಿಕೊಳ್ಳಬಹುದು. ಹಾಗಾಗಿ ಬಟ್ಟೆಯನ್ನು ತೊಳೆಯದೆ ಬಳಸದಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...