alex Certify ಹೊಸ ದಾಖಲೆಗೆ ಪಾತ್ರರಾದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ದಾಖಲೆಗೆ ಪಾತ್ರರಾದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್

ನಿನ್ನೆ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಟಿ ಟ್ವೆಂಟಿ ವಿಶ್ವಕಪ್ ಸೂಪರ್‌ 12ರ ನಾಲ್ಕನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ವಿರುದ್ಧ 10 ವಿಕೆಟ್ ಗಳ ಜಯ ಸಾಧಿಸಿದೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 151ರನ್ ಗಳ ಮೊತ್ತ ದಾಖಲಿಸಿತು.

ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡದಲ್ಲಿ ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಮ್ 152ರನ್ ಗಳ ಜೊತೆಯಾಟವಾಡಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಆರಂಭಿಕ ಆಟಗಾರರ ಅತಿದೊಡ್ಡ ಪಾರ್ಟ್ ನರ್ ಶಿಪ್ ಇದಾಗಿದ್ದು ಈ ಮೂಲಕ ಹೊಸ ದಾಖಲೆಗೆ ಈ ಇಬ್ಬರು ಪಾತ್ರರಾಗಿದ್ದಾರೆ.

BIG NEWS: ಸಮಾಜ ಒಡೆಯುವಲ್ಲಿ ನಿಮಗಿಂತ ನಿಷ್ಠಾತರು ಬೇರೆ ಇಲ್ಲ; ‘ಜಾತಿ ವಿಭಜಕ ಸಿದ್ದರಾಮಯ್ಯ’ ಎಂದು ಕಿಡಿಕಾರಿದ BJP

2007ರಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಡೆದ ಟಿ ಟ್ವೆಂಟಿ ವಿಶ್ವಕಪ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಓಪನಿಂಗ್ ಬ್ಯಾಟ್ಸ್ ಮನ್ ಗಳಾದ ಕ್ರಿಸ್ ಗೇಲ್ ಹಾಗೂ ಡ್ವೇನ್ ಸ್ಮಿತ್  145ರನ್ ಗಳ ಗಳ ಜೊತೆಯಾಟವಾಡಿದ್ದರು ಈ ದಾಖಲೆಯನ್ನು ಇದೀಗ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಸರಿಗಟ್ಟಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...