alex Certify ಹೊರಗೆ ಮಾತ್ರವಲ್ಲ ಮನೆಯೊಳಗೂ ಇರುತ್ತೆ ವಿಪರೀತ ವಾಯುಮಾಲಿನ್ಯ; ಅದನ್ನು ನಿವಾರಿಸುವುದೇಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊರಗೆ ಮಾತ್ರವಲ್ಲ ಮನೆಯೊಳಗೂ ಇರುತ್ತೆ ವಿಪರೀತ ವಾಯುಮಾಲಿನ್ಯ; ಅದನ್ನು ನಿವಾರಿಸುವುದೇಗೆ ಗೊತ್ತಾ….?

ವಾಯು ಮಾಲಿನ್ಯದ ಪ್ರಮಾಣ ನಗರಗಳಲ್ಲಿ ದಿನೇ ದಿನೇ ಹೆಚ್ಚುತ್ತಲೇ ಇದೆ. ಇದು ಆರೋಗ್ಯಕ್ಕೆ ಅಪಾಯಕಾರಿ. ಹಾಗಾಗಿ ಮನೆಯಿಂದ ಹೊರಬರುವ ಮುನ್ನ ಮುಂಜಾಗ್ರತೆ ವಹಿಸುವುದು ಅವಶ್ಯಕ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿಯೆಂದರೆ ಮನೆಯೊಳಗೆ ಅಡಗಿರುವ ಮಾಲಿನ್ಯ.

ಸದ್ಯ ಭಾರತದಲ್ಲಿ ಹಬ್ಬಗಳ ಸೀಸನ್.‌ ವಿಜಯದಶಮಿಯ ಬಳಿಕ ದೀಪಾವಳಿಗೆ ಸಿದ್ಧತೆ ಶುರುವಾಗಿದೆ. ಹಾಗಾಗಿ ಎಲ್ಲರೂ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಇದೇ ಸಮಯದಲ್ಲಿ ಮನೆಯೊಳಗಿನ ಮಾಲಿನ್ಯವನ್ನೂ ಶುಚಿಗೊಳಿಸುವುದು ಉತ್ತಮ.

ಮನೆಯೊಳಗೆ ಸಾಕಷ್ಟು ಧೂಳು ಮತ್ತು ಮಣ್ಣು ಸಂಗ್ರಹವಾಗುತ್ತದೆ. ಕೆಮಿಕಲ್ ಕ್ಲೀನರ್ ಬಳಸಿದರೂ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಶುದ್ಧೀಕರಣದಲ್ಲಿ ಬಳಸುವ ರಾಸಾಯನಿಕಗಳು ನಮಗೆ ಮಾರಕವಾಗಬಹುದು. ಅದೇ ಮನೆಯಲ್ಲಿ ವಾಸಿಸುವುದರಿಂದ ನಾವು ರಾಸಾಯನಿಕಯುಕ್ತ ಗಾಳಿಯನ್ನು ತಿನ್ನುತ್ತೇವೆ. ಆಹಾರದ ಮೂಲಕವೂ ಅದು ನಮ್ಮ ಹೊಟ್ಟೆ ಸೇರುತ್ತದೆ. ಕೆಲವೊಮ್ಮೆ ಇದು ಶ್ವಾಸಕೋಶದ ಕಾಯಿಲೆ ಮತ್ತು ಅಸ್ತಮಾಗೆ ಕಾರಣವಾಗಬಹುದು.

ಫ್ರಿಡ್ಜ್, ಎಸಿ, ಟಿವಿ, ಲ್ಯಾಪ್‌ಟಾಪ್, ಟ್ಯೂಬ್ ಲೈಟ್, ಮಿಕ್ಸರ್, ಓವನ್‌ನಂತಹ ಎಲೆಕ್ಟ್ರಾನಿಕ್ ವಸ್ತುಗಳಿಂದ ಹೊರಬರುವ ಅನಿಲಗಳು ಆರೋಗ್ಯಕ್ಕೆ ಅಪಾಯಕಾರಿ. ಆದ್ದರಿಂದ ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡಲು ಕೆಲವು ಸಲಹೆಗಳನ್ನು ಪಾಲಿಸಬೇಕು.

ಕಿಟಕಿ ಮತ್ತು ಬಾಗಿಲುಗಳನ್ನು ತೆರೆದಿಡಿ – ವಾರದಲ್ಲಿ ಒಮ್ಮೆಯಾದರೂ, ಚೆನ್ನಾಗಿ ಬಿಸಿಲಿದ್ದಾಗ ಎಸಿ ಆಫ್ ಮಾಡಿ. ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ. ನಂತರ ಅವುಗಳ ಮೇಲೆ ಸಂಗ್ರಹವಾದ ಧೂಳನ್ನು ಸ್ವಚ್ಛಗೊಳಿಸಿ. ಒದ್ದೆಯಾದ ಬಟ್ಟೆಯಿಂದ ಒರೆಸಿ. ಸ್ವಚ್ಛತಾ ಕಾರ್ಯದ ಸಂದರ್ಭದಲ್ಲಿ ಮಾಸ್ಕ್‌ ಧರಿಸಿ.

ಬಿಸಿ ನೀರಲ್ಲಿ ಬೆಡ್‌ಶೀಟ್‌ ತೊಳೆಯಿರಿ – ಮನೆಯಲ್ಲಿ ನಾವು ಬಳಸುವ ಹಾಸಿಗೆಗಳು, ಬೆಡ್‌ಶೀಟ್‌ಗಳು ಮತ್ತು ಪೀಠೋಪಕರಣಗಳ ಕವರ್‌ಗಳನ್ನು ವಾರಕ್ಕೊಮ್ಮೆ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಬೇಕು. ತೊಳೆಯಬಹುದಾದ ಆಟಿಕೆಗಳನ್ನು ಸಹ ಸ್ವಚ್ಛಗೊಳಿಸಬೇಕು ಮತ್ತು ಸಂಪೂರ್ಣವಾಗಿ ಒಣಗಿಸಬೇಕು. ಇದು  ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪೀಠೋಪಕರಣಗಳು ಮತ್ತು ಮೂಲೆಗಳನ್ನು ಸ್ವಚ್ಛಗೊಳಿಸುವುದು – ಪೀಠೋಪಕರಣಗಳು, ಪರದೆಗಳು ಮತ್ತು ಕಾರ್ಪೆಟ್‌ಗಳ ಮೇಲೆ ಸಂಗ್ರಹವಾದ ಧೂಳನ್ನು ವಾರಕ್ಕೊಮ್ಮೆ ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದಕ್ಕಾಗಿ ವ್ಯಾಕ್ಯೂಮ್ ಕ್ಲೀನರ್ ಬಳಸುವುದು ಉತ್ತಮ. ಇದಲ್ಲದೇ ಏರ್ ಪ್ಯೂರಿಫೈಯರ್ ಸಹಾಯದಿಂದ ಮನೆಯೊಳಗಿನ ಗಾಳಿಯನ್ನು ಕೂಡ ಸ್ವಚ್ಛಗೊಳಿಸಬಹುದು.

ಮನೆಯಲ್ಲಿ ವಾತಾಯನವನ್ನು ಹೆಚ್ಚಿಸಿಮನೆಯೊಳಗೆ ವಾತಾಯನವನ್ನು ಹೆಚ್ಚಿಸುವತ್ತ ಗಮನ ಹರಿಸಬೇಕು. ಕಿಟಕಿ ತೆರೆದರೆ ಹೊರಗಿನ ಗಾಳಿ, ಧೂಳು, ವಾಹನಗಳ ಹೊಗೆ ಒಳಗೆ ಬರಬಹುದು. ಹಾಗಾಗಿ ಟ್ರಿಕಲ್ ವಾತಾಯನವನ್ನು ಬಳಸಿ. ಇದು ಗಾಳಿಯನ್ನು ಫಿಲ್ಟರ್ ಮಾಡುತ್ತದೆ. ಶುದ್ಧ ಗಾಳಿ ಮಾತ್ರ ಒಳಗೆ ಬರಲು ಅನುವು ಮಾಡಿಕೊಡುತ್ತದೆ.

ಏರ್ ಫಿಲ್ಟರ್ ಬಳಕೆಮನೆಯೊಳಗೆ ಶುದ್ಧ ಗಾಳಿಯನ್ನು ಪಡೆಯಲು ಮತ್ತು ಮಾಲಿನ್ಯದಿಂದ ದೂರವಿರಲು ಏರ್ ಫಿಲ್ಟರ್‌ಗಳನ್ನು ಬಳಕೆ ಮಾಡಬಹುದು. ಇದರಿಂದ ಮನೆಯ ಒಳಗಿನ ವಾಯು ಮಾಲಿನ್ಯ ನಿವಾರಣೆಯಾಗುತ್ತದೆ. ಉತ್ತಮ ಗಾಳಿಯಲ್ಲಿ ನಾವು ಉಸಿರಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...