alex Certify ಹೈದರಾಬಾದ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ ಈ ಖತರ್ನಾಕ್ ಕಳ್ಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈದರಾಬಾದ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ ಈ ಖತರ್ನಾಕ್ ಕಳ್ಳ

ಹೈದರಾಬಾದ್ ಪೊಲೀಸರಿಗೆ ಖತರ್ನಾಕ್ ಕಳ್ಳನೊಬ್ಬ ತಲೆನೋವಾಗಿ ಪರಿಣಮಿಸಿದ್ದಾನೆ. ಈತನನ್ನು ಹಿಡಿಯಲು ಪೊಲೀಸರು ಹಗಲು – ರಾತ್ರಿ ಎನ್ನದೆ ಮೈಯೆಲ್ಲ ಕಣ್ಣಾಗಿಸಿಕೊಂಡರೂ ಈ ಕಳ್ಳ ಮಾತ್ರ ಬಲೆಗೆ ಬೀಳುತ್ತಿಲ್ಲ.

ಈ ವ್ಯಕ್ತಿ ನಗರಕ್ಕೆ ಹೇಗೆ ಬರುತ್ತಾನೆ ? ಎಲ್ಲಿಂದ ಬಂದು ತನ್ನ ಕೈಚಳಕ ತೋರಿಸಿ ಹೇಗೆ ಪರಾರಿಯಾಗುತ್ತಾನೆ ಎಂಬುವುದೇ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ಹೀಗೆ ಜನರಿಗೆ ಹಾಗೂ ಪೊಲೀಸರಿಗೆ ತಲೆನೋವಾಗಿರುವ ಈ ವ್ಯಕ್ತಿ ಬಂಧಿಸಲು 200 ಕ್ಕೂ ಹೆಚ್ಚು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೂ ಮಾತ್ರ ಈ ವ್ಯಕ್ತಿ ಬಲೆಗೆ ಬೀಳುತ್ತಿಲ್ಲ. ಈ ವ್ಯಕ್ತಿ ಎಲ್ಲೆಂದರಲ್ಲಿ ತನ್ನ ಕೈ ಚಳಕ ತೋರಿಸುತ್ತ, ಸರಗಳ್ಳತನ ಮಾಡುತ್ತ ಪರಾರಿಯಾಗುತ್ತಿದ್ದಾನೆ. ಹಲವು ದಿನಗಳಿಂದಲೂ ಈ ಕಳ್ಳನು ಪೊಲೀಸರಿಗೆ ಈ ರೀತಿ ಯಾಮಾರಿಸುತ್ತ ಹೋಗುತ್ತಿದ್ದಾನೆ.

ಹೈದರಾಬಾದ್ ನಗರದ ಮೂರು ಕಮೀಷನರೇಟ್ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿಯೇ ಈ ಖತರ್ನಾಕ್ ಕಳ್ಳ ತನ್ನ ಕೈ ಚಳಕ ತೋರಿಸಿದ್ದಾನೆ. ಹೀಗಾಗಿಯೇ ಈತನನ್ನು ಬಂಧಿಸುವುದಕ್ಕಾಗಿ ಪೊಲೀಸರ ತಂಡ ರಚಿಸಿದ್ದಾರೆ.

ಸುಮಾರು 200 ಜನ ಪೊಲೀಸರು ಈ ಕಳ್ಳನಿಗಾಗಿ ಮೈಯೆಲ್ಲ ಕಣ್ಣು ಮಾಡಿಕೊಂಡು ಹುಡುಕಾಟ ನಡೆಸಿದ್ದಾರೆ. ಅಲ್ಲಿನ ಸಿಸಿ ಟಿವಿ ಆಧಾರದ ಮೇಲೆ ಆತನಿಗಾಗಿ ಬಲೆ ಬೀಸಲು ಸಿದ್ಧತೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...