alex Certify ಹೈಕಮಾಂಡ್ ಆಶಯ ನನಗೆ ಆಜ್ಞೆ….! ರಾಹುಲ್ ಗಾಂಧಿಯವರ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದ ನವಜೋತ್ ಸಿಂಗ್ ಸಿಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈಕಮಾಂಡ್ ಆಶಯ ನನಗೆ ಆಜ್ಞೆ….! ರಾಹುಲ್ ಗಾಂಧಿಯವರ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಎಂದ ನವಜೋತ್ ಸಿಂಗ್ ಸಿಧು

ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಮುಖ್ಯಮಂತ್ರಿಯಾಗಿ ಯಾರನ್ನು ಮಾಡಬೇಕು ಎಂಬ ಬಗ್ಗೆ ರಾಹುಲ್ ಗಾಂಧಿ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ ಎಂದು ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ನಾನು ರಾಜಕೀಯಕ್ಕೆ ಬಂದಿದ್ದು ಬದಲಾವಣೆಗೆ, ಸ್ಥಾನಕ್ಕಾಗಿ ಅಲ್ಲ, ಪಕ್ಷದ ಹೈಕಮಾಂಡ್ ಆಶಯ ನನಗೆ ಆಜ್ಞೆ ಇದ್ದಂತೆ ಎಂದು ಸಿಧು ಹೇಳಿದ್ದಾರೆ. ಮುಖ್ಯಮಂತ್ರಿ ಪಟ್ಟಕ್ಕೇರಲಿ ಅಥವಾ ಆ ಸ್ಥಾನ ಸಿಗದಿರಲಿ, ನನ್ನ ಕೊನೆ ಉಸಿರು ಇರುವವರೆಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದಲು, ಹಾಲಿ ಸಿಎಂ ಚನ್ನಿ ಹಾಗೂ ಸಿಧು ನಡುವೆ ಮುಖ್ಯಮಂತ್ರಿ ರೇಸ್ ನಡೆಯುತ್ತಿದೆ. ಈಗಾಗ್ಲೇ ಸಿಧು ಹಲವು ಬಾರಿ ತಮ್ಮನ್ನೆ ಸಿಎಂ ಅಭ್ಯರ್ಥಿ ಮಾಡಿ ಎಂದು ಒತ್ತಾಯ ಹಾಕಿರುವ ಘಟನೆಗಳು ನಡೆದಿವೆ. ಇದಕ್ಕೆ ನಿದರ್ಶನ ಎಂಬಂತೆ ಕೆಲ ದಿನಗಳ ಹಿಂದೆ, ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಕಾಂಗ್ರೆಸ್ ಪಕ್ಷ ಸರಿಯಾದ ನಿರ್ಧಾರ ತೆಗೆದ್ಕೊಂಡರೆ ಪಂಜಾಬ್‌ನಲ್ಲಿ ಕಾಂಗ್ರೆಸ್ 70 ಸ್ಥಾನಗಳನ್ನು ಗೆಲ್ಲಬಹುದು ಎಂದಿದ್ದರು.

BIG NEWS: ಬೇರೆ ದೇಶಕ್ಕೆ ಹೋಗೆನಲು ಈ ದೇಶ ಏನು ನಿಮ್ಮ ತಾತಂದಾ….? ಜನಪ್ರತಿನಿಧಿಯಾಗಿ ಜವಾಬ್ದಾರಿಯುತ ಮಾತನಾಡಿ; ಪ್ರತಾಪ್ ಸಿಂಹಗೆ ತನ್ವೀರ್ ಸೇಠ್ ತಿರುಗೇಟು

ಫೆಬ್ರವರಿ 6 ರಂದು ಕಾಂಗ್ರೆಸ್ ಘೋಷಣೆ

ಫೆಬ್ರವರಿ 6ರಂದು ರಾಹುಲ್ ಗಾಂಧಿ ಪಂಜಾಬ್‌ನ ಲುಧಿಯಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹರೀಶ್ ಚೌಧರಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಂಜಾಬ್ ಚುನಾವಣೆಗೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಿಸಲಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಂತ್ರಿ ಅಭ್ಯರ್ಥಿ ಬಗ್ಗೆ, ಪಕ್ಷವು ತನ್ನ ಶಕ್ತಿ ಆ್ಯಪ್ ಮೂಲಕ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಈ ಕುರಿತು ಜನರ ಅಭಿಪ್ರಾಯವನ್ನೂ ಕೇಳಿದ್ದು, ಕಳೆದ ಎರಡು ದಿನಗಳಿಂದ ಪ್ರಕ್ರಿಯೆ ಆರಂಭವಾಗಿದೆ. ಕಳೆದ ಹಲವು ವಾರಗಳಲ್ಲಿ, ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ನೇರವಾಗಿ ಅಥವಾ ಪರೋಕ್ಷವಾಗಿ ತಮ್ಮನ್ನೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ಹಲವು ಬಾರಿ ಒತ್ತಾಯಿಸಿದ್ದಾರೆ.

ಪ್ರತಿಪಕ್ಷ ಆಮ್ ಆದ್ಮಿ ಪಕ್ಷವು ಈಗಾಗಲೇ ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ಶಿರೋಮಣಿ ಅಕಾಲಿದಳವು ಅದೇ ಸ್ಥಾನಕ್ಕೆ ತನ್ನ ಮುಖ್ಯಸ್ಥ ಸುಖಬೀರ್ ಬಾದಲ್ ಅವರನ್ನು ಮುಂದಿಟ್ಟಿದೆ. ಪಂಜಾಬ್ ವಿಧಾನಸಭೆ ಚುನಾವಣೆ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...