alex Certify ಹೆಗಲ ಮೇಲೆ ದೈತ್ಯ ಹೆಬ್ಬಾವನ್ನು ಹೊತ್ತೊಯ್ದ ವ್ಯಕ್ತಿ: ವಿಡಿಯೋ ನೋಡಿ ನೆಟ್ಟಿಗರು ದಿಗ್ಭ್ರಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಗಲ ಮೇಲೆ ದೈತ್ಯ ಹೆಬ್ಬಾವನ್ನು ಹೊತ್ತೊಯ್ದ ವ್ಯಕ್ತಿ: ವಿಡಿಯೋ ನೋಡಿ ನೆಟ್ಟಿಗರು ದಿಗ್ಭ್ರಮೆ

ನಿಮಗೆ ದಾರಿಯಲ್ಲಿ ನಡೆಯುತ್ತಾ ಹೋಗುತ್ತಿರಬೇಕಿದ್ರೆ ಆಕಸ್ಮಾತ್ ಆಗಿ ಹೆಬ್ಬಾವು ಕಾಣಿಸಿಕೊಂಡ್ರೆ ಏನಾಗಬಹುದು..? ಒಂದು ಕ್ಷಣ ಹೃದಯ ನಿಂತಂತ ಅನುಭವವಾಗಬಹುದು ಅಲ್ವಾ..? ಎಷ್ಟೋ ಮಂದಿ ತೋಟದಲ್ಲಿ ಕೆಲಸ ಮಾಡುತ್ತಿರಬೇಕಿದ್ರೆ ಗೊತ್ತಿಲ್ಲದೆ ಹೆಬ್ಬಾವುಗಳ ಮೇಲೆ ಕಾಲಿಟ್ಟವರೂ ಇದ್ದಾರೆ. ಇದೀಗ ಇಲ್ಲೊಂದು ವೈರಲ್ ಆಗಿರುವ ವಿಡಿಯೋ ನೋಡಿದ್ರೆ ಮಾತ್ರ ನಿಮಗೆ ನಗು ತರಿಸದೆ ಇರಲಾರದು.

ಹೌದು, ಸಾಕು ನಾಯಿಯನ್ನು ಹೊತ್ತು ನಡೆಯುವಂತೆ ಹೆಬ್ಬಾವನ್ನು ಹೆಗಲ ಮೇಲೆ ಹಾಕಿಕೊಂಡು ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಪ್ರಾಣಿ ಸಂಗ್ರಹಾಲಯದ ದೃಶ್ಯ ಇದಾಗಿದ್ದು, ಹೆಬ್ಬಾವಿನ ಪಾಲಕ ದೈತ್ಯಾಕಾರದ ಹಾವನ್ನು ಹೆಗಲ ಮೇಲೆ ಹೊತ್ತು ಒಳಹೊಕ್ಕಿದ್ದಾನೆ. ಹೆಬ್ಬಾವು ಕೂಡ ದೈನಂದಿನ ದಿನಚರಿ ಎಂಬಂತೆ ಶಾಂತವಾಗಿದೆ. ಆತ ಕೋಣೆಗೆ ಪ್ರವೇಶಿಸುವ ಮೊದಲು ದಾರಿಯಲ್ಲಿ ಎತ್ತರದ ಆವರಣಗಳಿಗೆ ಹೊಡೆಯುವುದನ್ನು ತಪ್ಪಿಸಲು ತನ್ನ ತಲೆಯನ್ನು ತಗ್ಗಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಈ ಪೋಸ್ಟ್ ಗೆ ಎಂಟು ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳು ಬಂದಿವೆ. ವಿಡಿಯೋ ನೋಡಿದ ನೆಟ್ಟಿಗರು ಬೆರಗಾಗಿದ್ದು, ಇದಕ್ಕಿಂತ ದೊಡ್ಡ ಹಾವನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಹೆಬ್ಬಾವು ಕುಳಿತ ರೀತಿ ನೋಡಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ನಗೆಬೀರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...