alex Certify ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ವಿಮಾನದ ಬಿಸಿನೆಸ್ ಕ್ಲಾಸ್‌ಗೆ ಅಪ್‌ಗ್ರೇಡ್ ಆದ ವ್ಯಕ್ತಿಗೆ ನೆಟ್ಟಿಗರಿಂದ ತರಾಟೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡತಿಯನ್ನು ಒಂಟಿಯಾಗಿ ಬಿಟ್ಟು ವಿಮಾನದ ಬಿಸಿನೆಸ್ ಕ್ಲಾಸ್‌ಗೆ ಅಪ್‌ಗ್ರೇಡ್ ಆದ ವ್ಯಕ್ತಿಗೆ ನೆಟ್ಟಿಗರಿಂದ ತರಾಟೆ..!

ನೀವು ಎಲ್ಲಾದ್ರೂ ಪ್ರವಾಸ ಕೈಗೊಂಡಾಗ ಜೊತೆಗೆ ಸಂಗಾತಿ ಅಥವಾ ಸ್ನೇಹಿತರಿದ್ದರೆ ಪ್ರಯಾಣ ಸುಖಕರವಾಗಿರುತ್ತದೆ. ಇಲ್ಲದಿದ್ದಲ್ಲಿ ಬೋರ್ ಎಂದೆನಿಸುತ್ತದೆ.

ಆದರೆ, ಇಲ್ಲೊಬ್ಬ 12 ಗಂಟೆಗಳ ವಿಮಾನ ಪ್ರಯಾಣದಲ್ಲಿ ಹೆಂಡತಿಯನ್ನು ಎಕಾನಮಿ ಕ್ಲಾಸ್ ನಲ್ಲಿ ಬಿಟ್ಟು, ಈತ ಮಾತ್ರ ಬಿಸಿನೆಸ್ ಕ್ಲಾಸ್‌ಗೆ ಅಪ್‌ಗ್ರೇಡ್ ಮಾಡಿದ್ದಾನೆ. ಇದಕ್ಕೆ ನೆಟ್ಟಿಗರು ಆನ್‌ಲೈನ್‌ನಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಎಕಾನಮಿ ಕ್ಲಾಸ್‌ನಲ್ಲಿ ಬಿಟ್ಟು, ಈತ ಬಿಸಿನೆಸ್ ಕ್ಲಾಸ್‌ಗೆ ಅಪ್‌ಗ್ರೇಡ್ ಆಗಿದ್ದ. ಪತಿಯ ಈ ನಿರ್ಧಾರದಿಂದ ಹೆಂಡತಿ ಅಸಮಾಧಾನಗೊಂಡಿದ್ದಳು. ಈ ನಿರ್ಧಾರ ತಪ್ಪೇ ಎಂದು ಪತಿ ರೆಡ್ಡಿಟ್‌ನಲ್ಲಿ ಕೇಳಿಕೊಂಡಿದ್ದಾನೆ. ನೆಟ್ಟಿಗರು ಆತನ ಪತ್ನಿಯ ಪರ ನಿಂತಿದ್ದು, ಈತನನ್ನು ಸ್ವಾರ್ಥಿ ಎಂದು ಜರೆದಿದ್ದಾರೆ.

ಈತನ ಪತ್ನಿಯು 12 ಗಂಟೆಗಳ ವಿಮಾನ ಪ್ರಯಾಣದಲ್ಲಿ ಒಟ್ಟಿಗೆ ಕುಳಿತುಕೊಳ್ಳಲು ಬಯಸಿದ್ದಳು, ಆದರೆ, ಆ ಸಮಯ ರಾತ್ರಿಯಾಗಿದ್ದರಿಂದ ವಿಮಾನದಲ್ಲಿರುವ ಪ್ರಯಾಣಿಕರೆಲ್ಲರೂ ನಿದ್ರಿಸಲಿದ್ದಾರೆ. ಹೀಗಾಗಿ ಅದು ಮುಖ್ಯ ಅಂತಾ ಭಾವಿಸಲಿಲ್ಲ ಎಂದು ಆತ ಹೇಳಿದ್ದಾನೆ.

ನೆಟ್ಟಿಗರು ಮಾತ್ರ ಪತಿಯ ತೀರ್ಮಾನವನ್ನು ಮೂದಲಿಸಿದ್ದಾರೆ. ಎರಡೂ ಸೀಟುಗಳನ್ನು ಅಪ್‌ಗ್ರೇಡ್ ಮಾಡುವುದು ಉತ್ತಮ. ಆದರೆ, ನಿಮ್ಮದನ್ನು ಮಾತ್ರ ಅಪ್‌ಗ್ರೇಡ್ ಮಾಡುವುದು ಸ್ವಾರ್ಥ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...