alex Certify ಹೃತಿಕ್ ರೋಷನ್ ಭೇಟಿಯಾದ ನಟಿ ಸಮಂತಾ ಲಾಕ್‌ವುಡ್: ಇಲ್ಲಿವೆ ಫೋಟೋಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃತಿಕ್ ರೋಷನ್ ಭೇಟಿಯಾದ ನಟಿ ಸಮಂತಾ ಲಾಕ್‌ವುಡ್: ಇಲ್ಲಿವೆ ಫೋಟೋಸ್

ನಟಿ ಸಮಂತಾ ಲಾಕ್‌ವುಡ್ ಇತ್ತೀಚೆಗೆ ಬಾಲಿವುಡ್ ನಟ ಹೃತಿಕ್ ರೋಷನ್ ರನ್ನು ಭೇಟಿಯಾಗಿದ್ದಾರೆ. ಹೃತಿಕ್ ಜೊತೆಗಿನ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಭಾರಿ ಟ್ರೆಂಡ್ ಆಗಿದೆ. ಚಲನಚಿತ್ರ ಕುಟುಂಬದಿಂದ ಬಂದಿರುವ ಹೃತಿಕ್ ರೋಷನ್ ರನ್ನು ಭೇಟಿಯಾಗಿ ಬಹಳ ಸಂತೋಷವಾಗಿದೆ ಎಂದು ಸಮಂತಾ ಶೀರ್ಷಿಕೆ ನೀಡಿದ್ದಾರೆ.

ಶೂಟ್ ದಿ ಹೀರೋ ಮತ್ತು ಹವಾಯಿ ಫೈವ್-0 ಚಿತ್ರಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟರ್ನ್ ಬ್ಯಾಕ್ ನೌ, ಸೈ-ಫೈಟರ್ ಮತ್ತು ಮೆಕ್ಸಿಕನ್ ಗೋಲ್ಡ್‌ನಲ್ಲೂ ಅಭಿನಯಿಸಿದ್ದಾರೆ.

ಇನ್ನು ಹೃತಿಕ್ ರೋಷನ್ ಮುಂಬರಲಿರುವ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಫೈಟರ್ ಎಂಬ ಆಕ್ಷನ್ ಸಿನಿಮಾದಲ್ಲಿ ಹೃತಿಕ್ ರೋಷನ್ ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ. ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಹೃತಿಕ್ ರೋಷನ್ ಕೊನೆಯ ಬಾರಿಗೆ ಟೈಗರ್ ಶ್ರಾಫ್ ಮತ್ತು ವಾಣಿ ಕಪೂರ್ ಜೊತೆ ನಟಿಸಿದ ಬ್ಲಾಕ್ ಬಸ್ಟರ್ ಹಿಟ್ ‘ವಾರ್’ನಲ್ಲಿ ಅಭಿನಯಿಸಿದ್ದರು. ಅದೇ ವರ್ಷ, ಅವರು 2019 ರಲ್ಲಿ ಬಿಡುಗಡೆಯಾದ ಸೂಪರ್- 30 ಚಿತ್ರದಲ್ಲಿ ನಟಿಸಿದ್ದಾರೆ.

 

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...