alex Certify ಹುಬ್ಬೇರಿಸುವಂತಿದೆ ವಿಶ್ವದ ಅತಿದೊಡ್ಡ ಬೋನಿ ಫಿಶ್ ತೂಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಬ್ಬೇರಿಸುವಂತಿದೆ ವಿಶ್ವದ ಅತಿದೊಡ್ಡ ಬೋನಿ ಫಿಶ್ ತೂಕ…!

The world's heaviest bone fish found in this country, people lost their sweat knowing the weight!ಪೋರ್ಚುಗಲ್‌ನ ಅಜೋರ್ಸ್ ದ್ವೀಪಸಮೂಹದಲ್ಲಿರುವ ಫೈಯಲ್ ದ್ವೀಪದಲ್ಲಿ ಅಜೈಂಟ್ ಸತ್ತ ಮೀನೊಂದು ಇತ್ತೀಚೆಗೆ ಪತ್ತೆಯಾಗಿದ್ದು, ಅದು ವಿಶ್ವದ ಗಮನ ಸೆಳೆದಿದೆ. ಮರೈನ್ ಸೈಂಟಿಸ್ಟ್ ಈ ಮೀನನ್ನು ವಿಶ್ವದ ಅತ್ಯಂತ ತೂಕದ ಬೋನಿ ಫಿಶ್ ಅಥವಾ ಸನ್‌ ಫಿಶ್ ಎಂದು ಕರೆದಿದ್ದಾರೆ.

ದೈತ್ಯ ಮೀನು ಮೂರು ಟನ್‌ ಅಥವಾ 6,049 ಪೌಂಡ್‌ಗಳು (2,744 ಕಿಲೋಗ್ರಾಂಗಳು), 12 ಅಡಿ (3.6 ಮೀಟರ್) ಎತ್ತರ ಮತ್ತು ಸುಮಾರು 11 ಅಡಿ (3.5 ಮೀಟರ್) ಉದ್ದವಿತ್ತು.

ಅಟ್ಲಾಂಟಿಕ್ ನ್ಯಾಚುರಲಿಸ್ಟ್ ಎಂಬ ಎನ್ ಜಿಒ ಸಂಸ್ಥೆಯೊಂದಿಗೆ ವಿಜ್ಞಾನಿ ಜೋಸ್ ನುನೋ ಗೋಮ್ಸ್- ಪೆರೇರಾ ಅವರು ಇದರ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ. ಮೀನು ಪರೀಕ್ಷಿಸುವ ಮತ್ತು ತೂಕಕ್ಕಾಗಿ ಭಾರವಾದ ಸಲಕರಣೆಗಳೊಂದಿಗೆ ಎತ್ತುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಅಧ್ಯಯನ ವೇಳೆ ಮೀನಿನ ತಲೆಯ ಮೇಲೆ ದೊಡ್ಡ ಗಾಯ ಕಂಡುಬಂದಿದೆ. ಇದು ಸಾಯುವ ಮೊದಲು ಅಥವಾ ನಂತರ ಸಂಭವಿಸಿದೆಯೇ ಎಂದು ನಿರ್ಧರಿಸಲು ವಿಜ್ಞಾನಿಗಳು ವಿಫಲರಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...