alex Certify ‘ಹುಡುಗಿ’ಯರು ಆರೋಗ್ಯಕ್ಕೆ ಸಂಬಂಧಪಟ್ಟ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹುಡುಗಿ’ಯರು ಆರೋಗ್ಯಕ್ಕೆ ಸಂಬಂಧಪಟ್ಟ ಈ ವಿಚಾರಗಳನ್ನು ತಿಳಿದುಕೊಳ್ಳಲೇಬೇಕು

ಹುಡುಗಿಯರು ತಮ್ಮ ಯೋನಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಕೆಲ ಹುಡುಗಿಯರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬ ಹುಡುಗಿಯು ತಮ್ಮ ಯೋನಿಯ ಆರೋಗ್ಯಕ್ಕೆ ಸಂಬಂಧಪಟ್ಟ ಈ ವಿಚಾರಗಳನ್ನು ತಿಳಿದಿರಲೇಬೇಕು.

ಮುಟ್ಟಿನ ವೇಳೆ ಧರಿಸುವ ಪ್ಯಾಡನ್ನು ಅಥವಾ ಬಟ್ಟೆಯನ್ನು ಆಗಾಗ ಬದಲಾಯಿಸುತ್ತಿರಬೇಕು. ಇಲ್ಲವಾದರೆ ಅದರಿಂದ ಉಂಟಾಗುವ ಕೆಟ್ಟ ವಾಸನೆಯಿಂದ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ.

ಹತ್ತಿಯಿಂದ ತಯಾರಿಸಿದ ಒಳ ಉಡುಪುಗಳನ್ನೇ ಬಳಸಬೇಕು. ಇದರಿಂದ ಯೋನಿಯಲ್ಲಿ ಸೋಂಕು ಉಂಟಾಗುವುದಿಲ್ಲ.

ಒಳ ಉಡುಪುಗಳನ್ನು ಪ್ರತಿದಿನ ಮೃದುವಾದ ಸೋಪಿನಿಂದ ಚೆನ್ನಾಗಿ ಒಗೆಯಬೇಕು. ಇಲ್ಲವಾದರೆ ಆ ಭಾಗದಲ್ಲಿ ಅಲರ್ಜಿ ಉಂಟಾಗುತ್ತದೆ. ಹಾಗೇ ಒಳ ಉಡುಪುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು.

ಯೋನಿಯ ಬಳಿ ಬೆಳೆಯುವ ಕೂದಲನ್ನು ಆಗಾಗ ತೆಗೆಯುತ್ತಿರಬೇಕು. ಆದರೆ ಅದಕ್ಕಾಗಿ ರೇಜರ್, ಬ್ಲೇಡ್ ಅಥವಾ ಕತ್ತರಿ ಬಳಸಬಾರದು.

ಸಂಭೋಗದ ನಂತರ ಹೆಚ್ಚಿನ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಯೋನಿಯನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...