alex Certify ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರೆ ಈ ರಾಶಿಯ ಹುಡುಗ್ರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಡುಗಿಯರನ್ನು ಹೆಚ್ಚು ಆಕರ್ಷಿಸ್ತಾರೆ ಈ ರಾಶಿಯ ಹುಡುಗ್ರು

ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿ ತನ್ನನ್ನು ಅತಿ ಹೆಚ್ಚು ಪ್ರೀತಿ ಮಾಡುವ ವ್ಯಕ್ತಿಯ ಪ್ರವೇಶವಾಗ್ಲಿ ಎಂದು ಬಯಸ್ತಾರೆ. ಪ್ರೀತಿ ತುಂಬಿದ ಸಂಸಾರ ತನ್ನದಾಗ್ಲಿ ಎಂಬುದು ಎಲ್ಲರ ಬಯಕೆ.

ಹಾಗಾಗಿಯೇ ಜಾತಕಗಳನ್ನು ನೋಡಿ ವಿವಾಹ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ನಂಬುವವರ ಸಂಖ್ಯೆ ಸಾಕಷ್ಟಿದೆ. ಬೆಳಿಗ್ಗೆ ಎದ್ದ ತಕ್ಷಣ ರಾಶಿ ಭವಿಷ್ಯ ನೋಡಿ ಕೆಲವರು ಮನೆ ಬಿಡ್ತಾರೆ. ಹಾಗೆ ರಾಶಿ, ಜಾತಕಗಳನ್ನು ನೋಡಿಯೇ ಮದುವೆ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ಯಾವ ರಾಶಿಯವರು ಹೆಚ್ಚು ಪ್ರೀತಿ ನೀಡ್ತಾರೆ ಎಂಬುದನ್ನು ಹೇಳುತ್ತದೆ.

ಎಲ್ಲ ರಾಶಿಗಳು ತಮ್ಮದೆ ವಿಶೇಷತೆಗಳನ್ನು ಹೊಂದಿವೆ. ಆದ್ರೆ ಈ ನಾಲ್ಕು ರಾಶಿಯ ಹುಡುಗರಿಗೆ ಹುಡುಗಿಯರು ಹೆಚ್ಚು ಆಕರ್ಷಿತರಾಗ್ತಾರಂತೆ.

ಮಿಥುನ : ಈ ರಾಶಿಯ ಹುಡುಗ್ರಿಗೆ ಹುಡುಗಿಯರನ್ನು ಸೆಳೆಯುವ ಕಲೆ ಗೊತ್ತಿರುತ್ತದೆ. ಯಾರನ್ನು ಬೇಕಾದ್ರೂ ಈ ರಾಶಿ ಹುಡುಗ್ರು ತಮ್ಮತ್ತ ಸೆಳೆದುಕೊಳ್ತಾರೆ. ಈ ರಾಶಿಯವರು ರೋಮ್ಯಾಂಟಿಕ್ ಹಾಗೂ ಆಕರ್ಷಕವಾಗಿರುತ್ತಾರೆ. ಮಾತಿನ ಮೇಲೆ ಹಿಡಿತವಿರುತ್ತದೆ.

ತುಲಾ : ಈ ರಾಶಿಯ ಹುಡುಗ್ರು ತಮ್ಮ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವುದನ್ನು ಕಲಿತಿರುತ್ತಾರೆ. ಪ್ರೀತಿ ಹಾಗೂ ಕೆಲಸ ಎರಡನ್ನೂ ಒಟ್ಟಿಗೆ ನಿಭಾಯಿಸಿಕೊಂಡು ಹೋಗ್ತಾರೆ. ತುಲಾ ರಾಶಿ ಹುಡುಗ್ರ ಜೊತೆ ಕೆಲವೇ ಕೆಲ ಹೊತ್ತು ಸಮಯ ಕಳೆದ್ರೂ ಹುಡುಗಿ ಆತನ ಆಕರ್ಷಣೆಗೊಳಗಾಗ್ತಾಳೆ.

ಸಿಂಹ : ಈ ರಾಶಿ ಹುಡುಗ್ರು ಸ್ವಭಾವದಲ್ಲಿ ತುಂಬಾ ಮೊಂಡರು. ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡ್ರೆ ಅವ್ರಷ್ಟು ಪ್ರಾಮಾಣಿಕ ವ್ಯಕ್ತಿಗಳು ಸಿಗಲು ಸಾಧ್ಯವೇ ಇಲ್ಲ. ಆರಾಮವಾಗಿ ಯಾವುದೇ ಹುಡುಗಿ ಜೊತೆ ಮಾತನಾಡಿ, ಆಕೆಯನ್ನು ಸೆಳೆಯುವ ಗುಣ ಈ ರಾಶಿ ಹುಡುಗರಲ್ಲಿರುತ್ತದೆ.

ಮಕರ : ಈ ರಾಶಿ ಹುಡುಗ್ರು ತುಂಬಾ ಸುಂದರವಾಗಿರುತ್ತಾರೆ. ಅವ್ರ ಸೌಂದರ್ಯ ಹುಡುಗಿಯರನ್ನು ಸೆಳೆಯುತ್ತದೆ. ಹುಡುಗಿಯರನ್ನು ಹೇಗೆ ಮಾತನಾಡಿಸಬೇಕು ಎಂಬುದು ಇವ್ರಿಗೆ ತಿಳಿದಿರುತ್ತದೆ. ಪ್ರೀತಿಯ ಮಾತುಗಳನ್ನಾಡುವ ಕಲೆ ಅವರಿಗೆ ಗೊತ್ತಿರುತ್ತದೆ. ಎಲ್ಲ ರಾಶಿಗಳ ಸ್ವಭಾವ ಗುಣದ ಮೇಲೆ ಆಧಾರಿತವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...