alex Certify ‘ಹೀರೆಕಾಯಿʼ ಸಾಂಬಾರು ಈ ರೀತಿಯಾಗಿ ಟ್ರೈ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹೀರೆಕಾಯಿʼ ಸಾಂಬಾರು ಈ ರೀತಿಯಾಗಿ ಟ್ರೈ ಮಾಡಿ ನೋಡಿ

ಬಿಸಿ ಬಿಸಿ ಅನ್ನಕ್ಕೆ ಹೀರೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ಮಜಾನೇ ಬೇರೆ. ಹೀರೆಕಾಯಿ ದೇಹದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಲ್ಲಿ ಸುಲಭವಾಗಿ ಹೀರೆಕಾಯಿ ಸಾಂಬಾರು ಮಾಡುವ ವಿಧಾನ ಇದೆ ನೋಡಿ.

ಬೇಕಾಗುವ ಸಾಮಗ್ರಿಗಳು:

ಹೀರೆಕಾಯಿ-2, ಅರಿಶಿನ-1/4 ಟೀ ಸ್ಪೂನ್, ತೊಗರಿಬೇಳೆ-1/4 ಕಪ್, ನೀರು-3 ಕಪ್, 1-ಲಿಂಬೆಹಣ್ಣು, ಎಣ್ಣೆ-1 ಚಮಚ, ತೆಂಗಿನಕಾಯಿ ತುರಿ-1/2 ಕಪ್, ಜೀರಿಗೆ-1/2 ಚಮಚ, ಹಸಿಮೆಣಸು-4, ಉಪ್ಪು-ರುಚಿಗೆ ತಕ್ಕಷ್ಟು, ಶುಂಠಿ-1 ಇಂಚು, ಕರಿಬೇವು-6 ಎಸಳು, ಕೊತ್ತಂಬರಿಸೊಪ್ಪು-ಸ್ವಲ್ಪ, ತುಪ್ಪ-1 ಚಮಚ, ಸಾಸಿವೆ-1/4 ಟೀ ಸ್ಪೂನ್, ಇಂಗು-ಚಿಟಿಕೆ.

ಮಾಡುವ ವಿಧಾನ:

ಹೀರೆಕಾಯಿ ಸಿಪ್ಪೆ ತಗೆದು ಚಿಕ್ಕದ್ದಾಗಿ ಕತ್ತರಿಸಿಕೊಂಡು ಒಂದು ಪಾತ್ರೆಗೆ ಹಾಕಿ 2 ಕಪ್ ನೀರು,ಸ್ವಲ್ಪ ಉಪ್ಪು ಹಾಕಿ ಬೇಯಲು ಇಡಿ. ನಂತರ ಒಂದು ಕುಕ್ಕರ್ ಗೆ ಬೇಳೆ ಹಾಕಿ ಅದಕ್ಕೆ 1 ¼ ಕಪ್ ನೀರು, ಚಿಟಿಕೆ ಅರಿಶಿನ, ಸ್ವಲ್ಪ ಎಣ್ಣೆ ಹಾಕಿ 2 ವಿಷಲ್ ಕೂಗಿಸಿಕೊಳ್ಳಿ. ಹಾಗೇ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಹಸಿಮೆಣಸು, ಜೀರಿಗೆ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ. ಇದನ್ನು ಬೇಯಿಸಿಟ್ಟುಕೊಂಡ ಹೀರೆಕಾಯಿಗೆ ಹಾಕಿ ಕುದಿಸಿ.

ನಂತರ ಬೇಯಿಸಿಟ್ಟುಕೊಂಡ ಬೇಳೆ ಸೇರಿಸಿ ಉಪ್ಪು, ಕರಿಬೇವು, ಜಜ್ಜಿದ ಶುಂಠಿ ಹಾಕಿ 8 ನಿಮಿಷಗಳ ಕಾಲ ಕುದಿಸಿ. ನಂತರ ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿ ಅರ್ಧ ಲಿಂಬೆ ಹಣ್ಣಿನ ರಸ ಹಿಂಡಿ. ನಂತರ ಒಗ್ಗರಣೆ ಪಾತ್ರೆಗೆ ತುಪ್ಪ ಹಾಕಿ ನಂತರ ಸಾಸಿವೆ, ಜೀರಿಗೆ ಇಂಗು ಹಾಕಿ ಇದನ್ನು ಸಾರಿಗೆ ಹಾಕಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...