alex Certify ಹೀಗೂ ಪ್ರಪೋಸ್ ಮಾಡಬಹುದು..! ಗೆಳತಿಗೆ ಪ್ರೇಮ ನಿವೇದನೆ ಮಾಡಲು ಕೆಫೆ ಸಹಾಯ ಕೋರಿದ ವ್ಯಕ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೂ ಪ್ರಪೋಸ್ ಮಾಡಬಹುದು..! ಗೆಳತಿಗೆ ಪ್ರೇಮ ನಿವೇದನೆ ಮಾಡಲು ಕೆಫೆ ಸಹಾಯ ಕೋರಿದ ವ್ಯಕ್ತಿ

ಸ್ಕಾಟ್ಲೆಂಡ್‍ನ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ವಿಭಿನ್ನವಾಗಿ ಮದುವೆ ಪ್ರಸ್ತಾಪ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಜಿಮ್ ಜಿಮ್ ಲಾರ್ಡ್ನರ್ ಎಂಬಾತ ಫುಡ್ ಬಾಕ್ಸ್‌ನಲ್ಲಿ ಬರೆದ ಸಂದೇಶದೊಂದಿಗೆ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಜಸ್ಟ್ ಈಟ್ ಮೂಲಕ ಹತ್ತಿರದ ಕೆಫೆಯಿಂದ ಸ್ಯಾಂಡ್‌ವಿಚ್ ಆರ್ಡರ್ ಮಾಡಿದ ಆತ ಈ ವಿಶೇಷ ವಿನಂತಿಯನ್ನು ಬರೆದಿದ್ದು, ಅದು ಭಾರಿ ವೈರಲ್ ಆಗಿದೆ. ಬಾಕ್ಸ್ ನ ಮೇಲೆ ನೀವು ನನ್ನನ್ನು ಮದುವೆಯಾಗುತ್ತೀರಾ ಎಂದು ಬರೆದಿದ್ದಾನೆ.

ಸ್ಕಾಟ್ಲೆಂಡ್‌ನ ಕ್ಲೈಡ್‌ಬ್ಯಾಂಕ್‌ನಲ್ಲಿರುವ ಕಿಲ್ಬೋವಿ ಕೆಫೆಗೆ ಪತ್ರ ಬರೆದ ಜಿಮ್, ದಯವಿಟ್ಟು ಈರುಳ್ಳಿಯೊಂದಿಗೆ ಟೋಸ್ಟಿ ಮೇಲೆ ಕೆಂಪು ಈರುಳ್ಳಿ ಸಿಗಬಹುದೇ. ಈರುಳ್ಳಿ ಟೋಸ್ಟಿ ಇರುವ ಪೆಟ್ಟಿಗೆಯ ಮೇಲೆ ನೀವು ನನ್ನನ್ನು ಮದುವೆಯಾಗುತ್ತೀರಾ ಎಂದು ಬರೆಯಬಹುದೇ ಎಂದು ಮನವಿ ಮಾಡಿಕೊಂಡಿದ್ದಾರೆ.

ಜಿಮ್ ಮನವಿಗೆ ಕೆಫೆ ಕೂಡ ಸಕರಾತ್ಮಕವಾಗಿ ಸ್ಪಂದಿಸಿರುವುದು ನಿಜಕ್ಕೂ ಅಭಿನಂದನಾರ್ಹ. ಸದ್ಯ ಈ ಪ್ರೇಮ ನಿವೇದನೆ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದ್ದು, ಹಲವರ ಮನಗೆದ್ದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...