alex Certify ಹಾರುತ್ತಿದ್ದ ವಿಮಾನದಲ್ಲಿ ನಡೀತು ಶಾಕಿಂಗ್‌ ಘಟನೆ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾರುತ್ತಿದ್ದ ವಿಮಾನದಲ್ಲಿ ನಡೀತು ಶಾಕಿಂಗ್‌ ಘಟನೆ; ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

Turkish Airlines plane makes emergency landing as passenger attack cabin crew - Türkiye News

ಇಸ್ತಾನ್‌ಬುಲ್‌: ಇಸ್ತಾನ್‌ಬುಲ್‌ನಿಂದ ಜಕಾರ್ತಕ್ಕೆ ಪ್ರಯಾಣಿಸುತ್ತಿದ್ದ ಟರ್ಕಿಷ್​ ಏರ್‌ಲೈನ್ಸ್ ವಿಮಾನವು ಮಧ್ಯೆಯೇ ತನ್ನ ಮಾರ್ಗವನ್ನು ಬದಲಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ಇಷ್ಟಾಗಿದ್ದರೆ ಇದು ಸುದ್ದಿಯಾಗುತ್ತಲೇ ಇರಲಿಲ್ಲ. ಹೀಗೆ ಮಾರ್ಗವನ್ನು ಬದಲಾಯಿಸಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದ ವಿಚಿತ್ರ ಕಾರಣದಿಂದಾಗಿ ಈ ಸುದ್ದಿ ಭಾರಿ ವೈರಲ್​ ಆಗುತ್ತಿದೆ.

ಇಸ್ತಾನ್‌ಬುಲ್‌ನಿಂದ ಜಕಾರ್ತದ ಬದಲು ವಿಮಾನವು ಮೆಡಾನ್‌ಗೆ ಹೋಗಿದ್ದಕ್ಕೆ ಕಾರಣವೇನೆಂದರೆ, ಪ್ರಯಾಣಿಕರೊಬ್ಬರು ಕ್ಯಾಬಿನ್ ಅಟೆಂಡೆಂಟ್‌ನ ಬೆರಳನ್ನು ಕಚ್ಚಿದ್ದು ! ಪ್ರಯಾಣಿಕನ ಈ ವರ್ತನೆಯಿಂದ ವಿಮಾನದಲ್ಲಿ ಕೆಲ ಸಮಯ ಅಲ್ಲೋಲಕಲ್ಲೋಲ ಉಂಟಾಗಿರುವುದಾಗಿ ವರದಿಯಾಗಿದೆ.

ಆಗಿದ್ದೇನೆಂದರೆ, ಇಂಡೋನೇಷ್ಯಾ ಪ್ರಜೆ ಮುಹಮ್ಮದ್ ಜಾನ್ ಜೈಜ್ ಬೌಡೆವಿಜ್ ಎಂಬ ಪ್ರಯಾಣಿಕ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ. ಆತನಿಗೆ ಹೀಗೆ ಮಾಡದಂತೆ ಕ್ಯಾಬಿನ್ ಅಟೆಂಡೆಂಟ್‌ ಬುದ್ಧಿ ಹೇಳಲು ಹೋಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಪ್ರಯಾಣಿಕ ಅವರ ಕೈಬೆರಳನ್ನು ಕಚ್ಚಿದ್ದಾನೆ. ಆಗ ಕ್ಯಾಬಿನ್ ಅಟೆಂಡೆಂಟ್‌ ನೋವಿನಿಂದ ಆ ಪ್ರಯಾಣಿಕನಿಗೆ ಬಾರಿಸಿದ್ದಾನೆ. ಹೀಗೆ ಇಬ್ಬರ ನಡುವೆ ಗುದ್ದಾಟ ಶುರುವಾಗಿ ವಿಮಾನದ ಪಥ ಬದಲಿಸಬೇಕಾಗಿ ಬಂತು.

ಪ್ರಯಾಣಿಕರು ಇದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್​ ಆಗುತ್ತಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇಂಡೋನೇಷ್ಯಾ ಪ್ರಜೆ ಮುಹಮ್ಮದ್ ಜಾನ್ ಜೈಜ್ ಬೌಡೆವಿಜ್ ಟರ್ಕಿಗೆ ವೈಯಕ್ತಿಕ ಪ್ರವಾಸದ ನಂತರ ಜಕಾರ್ತಾಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದ್ದು, ಪರಿಸ್ಥಿತಿ ಶಮನದ ನಂತರ ವಿಮಾನವನ್ನು ಪುನಃ ಜಕಾರ್ತಕ್ಕೆ ಬಿಡಲಾಗಿದೆ ಎಂದಿದ್ದಾರೆ ಪೊಲೀಸರು. ಪ್ರಯಾಣಿಕ ವಿಪರೀತ ಕುಡಿದು ವಿಮಾನ ಏರಿದ್ದ. ಆದ್ದರಿಂದ ಹೀಗೆ ಮಾಡಿದ್ದಾನೆ ಎಂದು ವಿಮಾನದ ಅಧಿಕಾರಿಗಳು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...