alex Certify ಹಸೆಮಣೆ ಏರ್ತಿದ್ದಾರಾ ಕರಿಷ್ಮಾ ಕಪೂರ್‌……? ಸುಳಿವು ಕೊಟ್ಟಿದೆ ಈ ಫೋಟೋ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸೆಮಣೆ ಏರ್ತಿದ್ದಾರಾ ಕರಿಷ್ಮಾ ಕಪೂರ್‌……? ಸುಳಿವು ಕೊಟ್ಟಿದೆ ಈ ಫೋಟೋ…..!

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಈಗ ಟಾಕ್‌ ಆಫ್‌ ದಿ ಟೌನ್‌ ಆಗಿದೆ. ಎಲ್ಲಾ ಕಡೆ ಈ ಸೆಲೆಬ್ರಿಟಿ ಜೋಡಿಯ ಫೋಟೋ ಮತ್ತು ವಿಡಿಯೋಗಳು ಹರಿದಾಡ್ತಿವೆ. ನಟಿ ಕರಿಷ್ಮಾ ಕಪೂರ್ ಕೂಡ ತಮ್ಮ ಸೋದರ ಸಂಬಂಧಿ ರಣಬೀರ್ ಕಪೂರ್ ಮದುವೆಯ ಕೆಲವು ವಿಶೇಷ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದರ ಬೆನ್ನಲ್ಲೇ ಕರಿಷ್ಮಾ ಕಪೂರ್‌ ಕೂಡ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ. ಕರಿಷ್ಮಾ ಕೈಯಲ್ಲಿ ಸಾಂಪ್ರದಾಯಿ ಕಲೀರಾ ಇರೋದೇ ಇದಕ್ಕೆ ಕಾರಣ. ಕಲೀರಾ ತಮ್ಮ ಮೇಲೆ ಬಿದ್ದಿದೆ ಅಂತ ಬರೆದುಕೊಂಡಿರೋ ಕರಿಷ್ಮಾ, ಅದನ್ನು ಕ್ಯಾಮರಾಗೂ ತೋರಿಸಿದ್ದಾರೆ.

ಪಂಜಾಬಿ ಸಂಪ್ರದಾಯದ ಪ್ರಕಾರ ಮದುವೆಯಲ್ಲಿ ವಧು ಬಳೆಗಳೊಂದಿಗೆ ಕಲೀರಾವನ್ನು ಧರಿಸ್ತಾಳೆ. ವಧು ತನ್ನ ಸ್ನೇಹಿತೆಯರು ಹಾಗೂ ಸಹೋದರಿಯರ ತಲೆಯ ಮೇಲೆ ಕಲೀರಾ ತೊಟ್ಟ ಕೈಗಳನ್ನು ಕುಣಿಸಬೇಕು. ಆಗ ಯಾರ ತಲೆ ಮೇಲೆ ಕಲೀರಾ ಬೀಳುತ್ತದೆಯೋ ನಂತರದ ಮದುವೆ ಸರದಿ ಅವರದ್ದು ಅನ್ನೋದು ನಂಬಿಕೆ. ಕಲೀರಾ ಕರಿಷ್ಮಾ ತಲೆ ಮೇಲೆ ಬಿದ್ದಿರೋದ್ರಿಂದ, ಕಪೂರ್‌ ಕುಟುಂಬದ ಈ ಸುಂದರಿ ಸದ್ಯದ್ಲಲೇ ಮತ್ತೊಮ್ಮೆ ಹಸೆಮಣೆ ಏರ್ತಿದ್ದಾರೆ ಅನ್ನೋ ಗುಸು ಗುಸು ಶುರುವಾಗಿದೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...