ಚಳಿಗಾಲದಲ್ಲಿ ವಾತಾವರಣ ತುಂಬಾ ತಂಪಾಗಿರುವುದರಿಂದ ಚರ್ಮ ತೇವಾಂಶ ಕಳೆದುಕೊಂಡು ಒಣಗುತ್ತದೆ. ಇದರಿಂದ ಚರ್ಮ ಕಪ್ಪಾಗುತ್ತದೆ, ಕಾಂತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಚರ್ಮ ಮೃದುವಾಗಿ ಹಾಲಿನಂತೆ ಬೆಳ್ಳಗಾಗಿರಲು ಹಸಿ ಹಾಲನ್ನು ಈ ರೀತಿಯಲ್ಲಿ ಬಳಸಿ.
ಬಾಳೆಹಣ್ಣನ್ನು ತೆಗೆದುಕೊಂಡು ಅದನ್ನು ಹಾಲಿನೊಂದಿಗೆ ರುಬ್ಬಿ ಪೇಸ್ಟ್ ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಬಿಟ್ಟು ಉಗುರು ಬೆಚ್ಚಗಿರುವ ನೀರಿನಿಂದ ಮುಖವನ್ನು ತೊಳೆಯಿರಿ. ಬಾಳೆಹಣ್ಣು ಮತ್ತು ಹಾಲು ಎರಡೂ ಚರ್ಮವನ್ನು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ ಮತ್ತು ಇದರಿಂದ ಚರ್ಮ ಹೊಳೆಯುತ್ತದೆ.
ಶಾಕಿಂಗ್: ನಾಲ್ವರು ಮುಗ್ಧ ವಿದ್ಯಾರ್ಥಿನಿಯರ ಮೇಲೆ ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರ
ಹಣ್ಣಾದ ಪಪ್ಪಾಯವನ್ನು ತೆಗೆದುಕೊಂಡು ಅದನ್ನು ಹಸಿ ಹಾಲಿನಲ್ಲಿ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ. ಒಣಗಿದ ಬಳಿಕ ತಣ್ಣೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಪಪ್ಪಾಯ ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಹಾಲಿನಲ್ಲಿರುವ ಪೋಷಕಾಂಶ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ.