alex Certify ಹಸಿದಾಗ ಊಟ ಸಿಗದಿದ್ದರೆ ತಿನಿಸುಗಳ ಫೋಟೋವನ್ನು 30 ಬಾರಿ ನೋಡಿ; ಅಲ್ಲಾಗುತ್ತೆ ಇಂಥಾ ಮ್ಯಾಜಿಕ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿದಾಗ ಊಟ ಸಿಗದಿದ್ದರೆ ತಿನಿಸುಗಳ ಫೋಟೋವನ್ನು 30 ಬಾರಿ ನೋಡಿ; ಅಲ್ಲಾಗುತ್ತೆ ಇಂಥಾ ಮ್ಯಾಜಿಕ್‌….!

ಹಸಿವಾದಾಗ ನಮಗೆ ಬಹಳ ರುಚಿಕರ ತಿನಿಸುಗಳೆಲ್ಲ ನೆನಪಾಗುತ್ತವೆ. ಪಿಜ್ಜಾ, ಬರ್ಗರ್‌, ಪಾನಿಪುರಿ, ಸ್ವೀಟ್‌ಗಳು ಹೀಗೆ ಏನೇ ಸಿಕ್ಕರೂ ತಿಂದುಬಿಡೋಣ ಎನಿಸುತ್ತದೆ. ಕೆಲವೊಮ್ಮೆ  ಪ್ರಯಾಣದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಊಟ-ಉಪಹಾರ ಸಿಗುವುದೇ ಇಲ್ಲ. ಆ ಸಮಯದಲ್ಲಿ ಹಸಿವಿನ ತೀವ್ರತೆಯನ್ನು ಸಹಿಸಿಕೊಳ್ಳುವುದು ಕಷ್ಟ. ಆದರೆ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಿಕೊಳ್ಳಬಹುದು. ವಿಪರೀತ ಹಸಿವಾದಾಗ ಬಗೆಬಗೆಯ ತಿನಿಸುಗಳ ಫೋಟೋಗಳನ್ನು ನೋಡಿದ್ರೆ ಸಾಕು ಎನ್ನುತ್ತಾರೆ ವಿಜ್ಞಾನಿಗಳು.

ಹೀಗೆ ಮಾಡುವುದರಿಂದ ಹಸಿವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. ತಿಂಡಿ-ತಿನಿಸುಗಳ ಫೋಟೋ ಅಥವಾ ವಿಡಿಯೋ ನೋಡಿದ್ರೆ ಹಸಿವು ಹೆಚ್ಚಾಗುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ ಎಪಟೈಪ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಆಹಾರದ ಚಿತ್ರಗಳು ನಿಖರವಾಗಿ ವಿರುದ್ಧ ಪರಿಣಾಮವನ್ನು ಬೀರುತ್ತವೆ. ಅದೇ ಫೋಟೋವನ್ನು 30ಕ್ಕೂ ಹೆಚ್ಚು ಬಾರಿ ನೋಡಿದರೆ ಹಸಿವು ಕಡಿಮೆಯಾಗುತ್ತದೆ ಎನ್ನಲಾಗುತ್ತಿದೆ.

ಒಂದೇ ಆಹಾರದ ಚಿತ್ರವನ್ನು 30 ಬಾರಿ ನೋಡಿದಾಗ ನಮ್ಮ ಮನಸ್ಸಿಗೆ ಹೆಚ್ಚು ಸಂತೋಷವಾಗುತ್ತದೆ. ಅದನ್ನು ತಿನ್ನದೇ ಇದ್ದರೂ ಅವರಿಗೆ ಹೊಟ್ಟೆ ತುಂಬಿದಂತೆ ಎನಿಸುತ್ತದೆ. ಹಸಿವು ನಮ್ಮ ಅರಿವಿನ ಗ್ರಹಿಕೆಯೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿದೆ. ಹಾಗಾಗಿ ನಮ್ಮ ಆಹಾರದ ಬಗ್ಗೆ ನಾವು ಹೇಗೆ ಯೋಚಿಸುತ್ತೇವೆ ಎಂಬುದು ಬಹಳ ಮುಖ್ಯ ಎನ್ನುತ್ತಾರೆ ಸಂಶೋಧಕರು.  ಈ ಅಧ್ಯಯನದ ಫಲಿತಾಂಶಗಳನ್ನು ಮಿದುಳಿನ ರೈಸರ್ಗಳಲ್ಲಿ ಆಧಾರವಾಗಿರುವ ಅರಿವಿನ ಸಿದ್ಧಾಂತದಿಂದ ಅರ್ಥಮಾಡಿಕೊಳ್ಳಬಹುದು.

ಈ ತತ್ವದ ಪರಿಣಾಮಗಳನ್ನು ವಿವರಿಸಲು, ನೀವು ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿದ ಹಸಿ ಮಾವಿನ ತುಂಡನ್ನು ತಿನ್ನುತ್ತಿದ್ದೀರೆಂದು ಊಹಿಸಿ. ಈ ಸಿದ್ಧಾಂತದ ಪ್ರಕಾರ, ಈ ಪ್ರಚೋದನೆಯು ಮೆದುಳಿನ ಅದೇ ಪ್ರದೇಶಗಳಲ್ಲಿ ಕಂಡುಬರುತ್ತದೆ, ನೀವು ನಿಜವಾಗಿಯೂ ಮಾವಿನಹಣ್ಣು ತಿನ್ನುತ್ತಿರುವಂತೆ. ನೀವು ಯೋಚಿಸುವ ಅದೇ ಮಾನಸಿಕ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ, ಆದ್ದರಿಂದ ನಾವು ತಿನ್ನದೆಯೂ ಸಹ ಸಂಪೂರ್ಣವಾಗಿ ತೃಪ್ತರಾಗಿರುತ್ತೇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...