alex Certify ಹಲ್ಲಿಯನ್ನೂ ಬಿಡಲಿಲ್ಲ ಕಾಮಾಂಧರು, ʼಬೆಂಗಾಲ್‌ ಮಾನಿಟರ್‌ʼ ಮೇಲೆ ಅತ್ಯಾಚಾರಕ್ಕೆ ಯತ್ನ…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲಿಯನ್ನೂ ಬಿಡಲಿಲ್ಲ ಕಾಮಾಂಧರು, ʼಬೆಂಗಾಲ್‌ ಮಾನಿಟರ್‌ʼ ಮೇಲೆ ಅತ್ಯಾಚಾರಕ್ಕೆ ಯತ್ನ…….!

ಕಾಮಾಂಧರು ಮಾಡಿರೋ ಈ ಕೃತ್ಯದ ಬಗ್ಗೆ ಕೇಳಿದ್ರೆ ಎಲ್ಲರೂ ಅಸಹ್ಯಪಟ್ಟುಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ. ಮಹಾರಾಷ್ಟ್ರದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಲ್ಲಿ ಮೇಲೆ ನಾಲ್ವರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ‘ಬಂಗಾಳ ಮಾನಿಟರ್ ಹಲ್ಲಿ’ಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಅರಣ್ಯಾಧಿಕಾರಿಯೇ ಈ ಮಾಹಿತಿ ನೀಡಿದ್ದಾರೆ.

ರತ್ನಗಿರಿ ಜಿಲ್ಲೆಯ ಗೋಥಾನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೀಸಲು ಪ್ರದೇಶದ ಚಂದೋಲಿ ರಾಷ್ಟ್ರೀಯ ಉದ್ಯಾನವನಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪಿಗಳ ವಿರುದ್ಧ ಮಾರ್ಚ್ 31ರಂದು ಎಫ್‌ಐಆರ್ ದಾಖಲಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.

ಆರೋಪಿಗಳನ್ನು ಸಂದೀಪ್ ತುಕಾರಾಂ ಪವಾರ್, ಮಂಗೇಶ್ ಕಮ್ಟೇಕರ್, ಅಕ್ಷಯ್ ಕಾಮ್ಟೇಕರ್ ಮತ್ತು ರಮೇಶ್ ಘಾಗ್ ಎಂದು ಗುರುತಿಸಲಾಗಿದೆ. ಹಲ್ಲಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಈ ನಾಲ್ವರು, ಆ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆ ವಿಡಿಯೋ ಕಣ್ಣಿಗೆ ಬಿದ್ದಿದೆ. ನಾಲ್ವರು ಆರೋಪಿಗಳ ವಿರುದ್ಧ ವನ್ಯಜೀವಿ (ರಕ್ಷಣೆ) ಕಾಯ್ದೆ 1972ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ‘ಬೆಂಗಾಲ್ ಮಾನಿಟರ್’ ಭಾರತೀಯ ಉಪಖಂಡದಲ್ಲಿ ಹಾಗೂ ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾದ ಭಾಗಗಳಲ್ಲಿ ಕಂಡುಬರುವ ದೊಡ್ಡ ಹಲ್ಲಿಯಾಗಿದೆ. ಭೂಮಿಯ ಮೇಲೆ ವಾಸಿಸುವ ಈ ಹಲ್ಲಿಯ ಉದ್ದ ಸುಮಾರು 24 ರಿಂದ 69 ಇಂಚುಗಳಷ್ಟಿರುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...