alex Certify ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ 2022ರ ಗಣರಾಜ್ಯೋತ್ಸವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲವು ಮೊದಲುಗಳಿಗೆ ಸಾಕ್ಷಿಯಾಗಲಿದೆ 2022ರ ಗಣರಾಜ್ಯೋತ್ಸವ

ಕೊರೋನಾದ ನಡುವೆಯು ಈ ವರ್ಷದ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಭರ್ಜರಿ ಸಿದ್ಧತೆ ನಡೆದಿದೆ. 75ನೇ ವರ್ಷದ ಆಚರಣೆಗೆ ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಹೆಸರಿಸುವುದರ ಜೊತೆಗೆ ಈ ವರ್ಷದ ಆಚರಣೆಗಳಲ್ಲಿ ಹಲವು ಪ್ರಥಮಗಳನ್ನ ಪರಿಚಯಿಸಲಾಗುತ್ತದೆ.

2022 ರ ಗಣರಾಜ್ಯೋತ್ಸವ ಆಚರಣೆಯ ಹೊಸ ಕಾರ್ಯಕ್ರಮಗಳ ಪಟ್ಟಿಯಲ್ಲಿ, ಭಾರತೀಯ ವಾಯುಪಡೆಯ 75 ವಿಮಾನಗಳ ಗ್ರ್ಯಾಂಡ್ ಫ್ಲೈ-ಪಾಸ್ಟ್ , ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 480 ನೃತ್ಯಗಾರರಿಂದ ಸಾಂಸ್ಕೃತಿಕ ಪ್ರದರ್ಶನಗಳು, 75 ಮೀಟರ್ ಉದ್ದದ 10 ಸ್ಕ್ರಾಲ್‌ಗಳ ಪ್ರದರ್ಶನ ಸೇರಿದೆ. ಕಾರ್ಯಕ್ರಮವನ್ನ ಪ್ರತಿಯೊಬ್ಬರು ವೀಕ್ಷಿಸಲು ಸ್ಥಳದಲ್ಲಿ 10 ದೊಡ್ಡ ಎಲ್ಇಡಿ ಪರದೆಗಳಿರಲಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

“ಆಜಾದಿ ಕಾ ಅಮೃತ್ ಮಹೋತ್ಸವ”ದ ಭಾಗವಾಗಿ 75 ವರ್ಷದ ಸ್ವಾತಂತ್ರ್ಯವನ್ನು ವಿಶ್ವದಾದ್ಯಂತ ಸಾರಲು 75 ವಿಮಾನಗಳು ಫ್ಲೈಫಾಸ್ಟ್ ನಡೆಸಲಿವೆ. ಫ್ಲೈ ಫಾಸ್ಟ್ ಈ ಇಡೀ ಆಚರಣೆಯ ಕೇಂದ್ರಬಿಂದುವಾಗಿದ್ದು, ಇದರ ಸ್ಮರಣಾರ್ಥವಾಗಿ ಮೊದಲ ಬಾರಿಗೆ ಐಎಎಫ್ ದೂರದರ್ಶನದಲ್ಲಿ ಕಾಕ್‌ಪಿಟ್ ವೀಡಿಯೊಗಳನ್ನು ಪ್ರದರ್ಶಿಸಲು ಸಮನ್ವಯಗೊಳಿಸಿದೆ ಎಂದು ಸಚಿವಾಲಯ ತಿಳಿಸಿದೆ.

ವಿಂಟೇಜ್ ಮತ್ತು ಆಧುನಿಕ ವಿಮಾನಗಳಾದ ರಫೇಲ್, ಸುಖೋಯ್, ಜಾಗ್ವಾರ್, ಎಂಐ -17, ಸಾರಂಗ್, ಅಪಾಚೆ ಮತ್ತು ಡಕೋಟಾ ವಿವಿಧ ರಚನೆಗಳನ್ನು ಪ್ರದರ್ಶಿಸುತ್ತದೆ. ರಾಹತ್, ಮೇಘನಾ, ಏಕಲವ್ಯ, ತ್ರಿಶೂಲ್, ತಿರಂಗಾ, ವಿಜಯ್ ಮತ್ತು ಅಮೃತ್ ಸೇರಿದಂತೆ 75 ವಿಮಾನಗಳು ಫ್ಲೈ-ಪಾಸ್ಟ್ ನಡೆಸಲಿವೆ‌.

ರಕ್ಷಣಾ ಮತ್ತು ಸಂಸ್ಕೃತಿ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ ‘ಕಲಾ ಕುಂಭ’ ಕಾರ್ಯಕ್ರಮದಲ್ಲಿ ತಯಾರಿಸಲಾದ 75 ಮೀಟರ್ ಉದ್ದ ಮತ್ತು 15 ಅಡಿ ಎತ್ತರದ ಹತ್ತು ಸುರುಳಿಗಳನ್ನು ಮೆರವಣಿಗೆಯ ಸಮಯದಲ್ಲಿ ರಾಜಪಥದ ಉದ್ದಕ್ಕೂ ಪ್ರದರ್ಶಿಸಲಾಗುತ್ತದೆ. ಇದು ಮೊದಲ ಬಾರಿ ನಡೆಯಲಿದ್ದು, ಸುರುಳಿಗಳನ್ನು ಭುವನೇಶ್ವರ ಮತ್ತು ಚಂಡೀಗಢದಲ್ಲಿ 600 ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಮತ್ತು ದೇಶಾದ್ಯಂತದ ಯುವ ಆಕಾಂಕ್ಷಿಗಳಿಂದ ಚಿತ್ರಿಸಲಾಗಿದೆ.

ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಯದಲ್ಲಿ ಪ್ರದರ್ಶನ ನೀಡುವ ನೃತ್ಯಗಾರರನ್ನು ಮೊದಲ ಬಾರಿಗೆ ವಂದೇ ಭಾರತಂ ಎಂಬ ರಾಷ್ಟ್ರವ್ಯಾಪಿ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗಿದೆ. ಈ ಸ್ಪರ್ಧೆಯು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದಿದ್ದು, ಸ್ಪರ್ಧೆಯಲ್ಲಿ 323 ಗುಂಪುಗಳು ಅಂದರೆ ಸುಮಾರು 3,870 ನೃತ್ಯಗಾರರು ಭಾಗವಹಿಸಿದ್ದರು‌. ಅಂತಿಮವಾಗಿ, 480 ನೃತ್ಯಗಾರರನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ನೃತ್ಯಗಾರರು ರಾಜಪಥ್‌ನಲ್ಲಿ ನಡೆಯುವ ಮೆರವಣಿಗೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಈ ಎಲ್ಲಾ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳಲು ರಾಜಪಥದ ಪ್ರತಿ ಬದಿಯಲ್ಲಿ 10 ದೊಡ್ಡ ಎಲ್ಇಡಿ ಪರದೆಗಳನ್ನು ಅಳವಡಿಸಲಾಗುವುದು. ಹಿಂದಿನ ಗಣರಾಜ್ಯೋತ್ಸವದ ಪರೇಡ್‌ಗಳ ತುಣುಕನ್ನು ಸಂಯೋಜಿಸುವ ಕ್ಯುರೇಟೆಡ್ ಚಲನಚಿತ್ರಗಳು, ಸಶಸ್ತ್ರ ಪಡೆಗಳ ಕಿರುಚಿತ್ರಗಳನ್ನ ಮೆರವಣಿಗೆಯ ಮೊದಲು ಪ್ರದರ್ಶಿಸಲಾಗುತ್ತದೆ. ಅದರ ನಂತರ, ಪರದೆಗಳು ಲೈವ್ ಈವೆಂಟ್ ಅನ್ನು ತೋರಿಸುತ್ತವೆ ಎಂದು ಸಚಿವಾಲಯ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...