alex Certify ಹನಿಮೂನ್​ ಪ್ರವಾಸಕ್ಕೆ ಫೇಮಸ್ ಭಾರತದ ಈ 5 ತಾಣಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹನಿಮೂನ್​ ಪ್ರವಾಸಕ್ಕೆ ಫೇಮಸ್ ಭಾರತದ ಈ 5 ತಾಣಗಳು

ಮದುವೆಯ ನಂತರ ಸಣ್ಣ ಪ್ರವಾಸ ನಿಮಗೆ ವಿಶೇಷ ಅನುಭವ ನೀಡುತ್ತದೆ. ನಿಮ್ಮ ಸಂಗಾತಿಯನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳಲು ನೆರವಾಗುತ್ತದೆ. ಆಹಾರದ ಅಭಿರುಚಿ, ವಸ್ತ್ರ ವಿನ್ಯಾಸ, ಸಾಮಾಜಿಕ ನಡವಳಿಕೆ, ನಾಚಿಕೆ ಸ್ವಭಾವ ಇದೆಲ್ಲದರಿಂದ ಹೊರಬರಲು ಹನಿಮೂನ್ ಟ್ರಿಪ್ ಪ್ರಯೋಜನಕಾರಿ. ಈ ನಿಟ್ಟಿನಲ್ಲಿ ಭಾರತದ 5 ಫೇಮಸ್ ಹನಿಮೂನ್ ತಾಣಗಳು ಇಲ್ಲಿವೆ ನೋಡಿ.

1. ಗೋವಾ : ಸಾಮಾನ್ಯವಾಗಿ ಸಮುದ್ರ ಪ್ರಿಯರ ಆದ್ಯತೆಯ ಪಟ್ಟಿಯಲ್ಲಿ ಗೋವಾ ಮೊದಲ ಸ್ಥಾನದಲ್ಲಿರುತ್ತದೆ. ಅದರಲ್ಲೂ ನವ ಜೋಡಿಗಳಿಗೆ ಗೋವಾ ಬೀಚ್ ಹೆಚ್ಚು ಆಪ್ತ. ಒಬ್ಬರನ್ನೊಬ್ಬರು ಪರಸ್ಪರ ಅರಿತುಕೊಳ್ಳಲು ಇಲ್ಲಿನ ವಾತಾವರಣ ನೆರವಿಗೆ ಬರುತ್ತದೆ. ಮದುವೆಯ ಒತ್ತಡ, ಬಂಧು ಬಾಂಧವರ ಮನೆಯ ವಿಸಿಟ್ಸ್ ಇದೆಲ್ಲದರ ನಂತರ ನಿರಾಳವಾಗಿ ಇಲ್ಲಿ ಟೈಂ ಸ್ಪೆಂಡ್ ಮಾಡಬಹುದು.

2. ಮನಾಲಿ : ಗಿರಿಧಾಮಗಳಲ್ಲಿ ತಂಪಾದ ವಾತಾವರಣದ ನಡುವೆ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಮನಾಲಿಗಿಂತ ಬೆಸ್ಟ್ ಪ್ಲೇಸ್​ ಇನ್ನೊಂದಿಲ್ಲ. ಹಿಮಾಚಲ ಪ್ರದೇಶದಲ್ಲಿರುವ ಮನಾಲಿಗೆ ಭಾರತ ಸೇರಿದಂತೆ ಸಾಕಷ್ಟು ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಾರೆ. ಹೋಂ ಸ್ಟೇ, ಕೆಫೆ ಸೆಂಟರ್, ರೆಸ್ಟೊರೆಂಟ್​ಗಳು ನಿಮಗೆ ಹೊಸ ಅನುಭವ ನೀಡುತ್ತವೆ.

5 Amazing Places to Visit During Kullu Manali Trip

BIG BREAKING: PSI ಹುದ್ದೆ ನೇಮಕಾತಿ ಅಕ್ರಮ; ಮತ್ತೋರ್ವ ಪೊಲೀಸ್ ಪೇದೆ ಅರೆಸ್ಟ್

3. ಕೇರಳ : ಕೇರಳದ ಪ್ರಶಾಂತ ವಾತಾವರಣ. ಅಲ್ಲಿಯ ಬೋಟ್​ ಹೌಸ್​ಗಳು ದಂಪತಿಗಳ ಖುಷಿಯ ಕ್ಷಣಗಳನ್ನು ಇಮ್ಮಡಿಗೊಳಿಸುತ್ತವೆ. ಕೇರಳದ ವಿಭಿನ್ನ ಆಹಾರ ಪದ್ಧತಿ, ಕಣ್ಣರಳಿಸುವ ಪ್ರಕೃತಿ ಸೌಂದರ್ಯ, ತಂಪಾದ ಗಾಳಿ ಇದೆಲ್ಲವೂ ಮನಸ್ಸಿಗೆ ನೆಮ್ಮದಿ ತರುವುದು ಗ್ಯಾರಂಟಿ.

Kerala rolls out aggressive promotional campaigns to revive tourism | The  Financial Express

4 : ಅಜಂತಾ ಎಲ್ಲೋರಾ : ವಿಶ್ವಪರಂಪರೆಯ ತಾಣಗಳ ಈ ಸ್ಥಳ ದಂಪತಿಗಳ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಇಲ್ಲಿನ ಕೆತ್ತನೆಗಳು ನಿಮ್ಮನ್ನು ಬೆರಗುಗೊಳಿಸುತ್ತವೆ. ಪ್ರವಾಸ ಪ್ರಿಯ ದಂಪತಿಗಳು ನೀವಾಗಿದ್ರೆ ಈ ಸ್ಥಳ ನಿಮಗೆ ವಿಶೇಷ ಒಳನೋಟಗಳನ್ನು ನೀಡುತ್ತದೆ.

5 of the most amazing caves in India other than the Ajanta and Ellora Caves  - Travel News

5 : ಕೊಡಗು : ಕೊಡಗು ಹೋಂ ಸ್ಟೇ ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಇಲ್ಲಿನ ಕಾಫಿ ಹೀರುತ್ತಾ, ಪ್ರಕೃತಿಯ ಸಿರಿಯನ್ನು ಕಣ್ತುಂಬಿಕೊಳ್ಳುತ್ತಾ ಪ್ರತಿ ಕ್ಷಣವನ್ನು ನೆಮ್ಮದಿಯಿಂದ ಕಳೆಯಬಹುದು. ಅಲ್ಲದೇ ನಿಮಗೆ ಬಜೆಟ್​ ಫ್ರೆಂಡ್ಲಿ ಕೂಡ ಹೌದು.

Kodagu Shuts Down Tourist Destinations But Allows Resorts And Homestays To  Stay Open! | WhatsHot Bangalore

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...