alex Certify ಹಜಾರಿಬಾಗ್‌ನಲ್ಲಿ ಅನ್ಯಗ್ರಹ ಜೀವಿ…? ಘಟನೆಯ ಅಸಲಿಯತ್ತು ಬೇರೆಯೇ ಇತ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಜಾರಿಬಾಗ್‌ನಲ್ಲಿ ಅನ್ಯಗ್ರಹ ಜೀವಿ…? ಘಟನೆಯ ಅಸಲಿಯತ್ತು ಬೇರೆಯೇ ಇತ್ತು ನೋಡಿ

ಹೆದ್ದಾರಿಯೊಂದರಲ್ಲಿ ಅನಾಮಿಕ ಜೀವಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿ, ಅದರಲ್ಲಿ ದೆವ್ವ ಅಥವಾ ಅನ್ಯಗ್ರಹ ಜೀವಿ ಇದೆ ಎಂದು ಎಲ್ಲರೂ ಭಾವಿಸಿದ್ದರು.

ಕೆಲ ಅತ್ಯುತ್ಸಾಹಿ ನೆಟ್ಟಿಗರು 30 ಸೆಕೆಂಡ್‌ಗಳ ಈ ಕ್ಲಿಪ್‌ಗೆ ನಾಸಾ ಹಾಗೂ ಇಸ್ರೋಗಳನ್ನು ಟ್ಯಾಗ್ ಮಾಡಿ ಶೇರ್‌ ಮಾಡಿಕೊಂಡಿದ್ದಾರೆ. ಟಿವಿ ಧಾರಾವಾಹಿ ನಿರ್ಮಾಪಕಿ ಎಕ್ತಾ ಕಪೂರ್‌ ಸಹ ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದು, ’ಭಾರೀ ಭೀತಿ ಮೂಡಿಸುತ್ತಿದೆ’ ಎಂದಿದ್ದರು.

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ಅಸಲಿಗೆ ಇರುವುದು ವಿವಸ್ತ್ರಳಾದ ಮಹಿಳೆ ಎಂದು ಅದೇ ಹೆದ್ದಾರಿಯಲ್ಲಿ ಓಡಾಡಿದ ಪ್ರತ್ಯಕ್ಷದರ್ಶಿಗಳನ್ನು ಸ್ಥಳೀಯ ವಾಹಿನಿಯೊಂದು ಸಂದರ್ಶಿಸಿದ ನಂತರ ತಿಳಿದುಬಂದಿದೆ.

ಆ ಮಹಿಳೆ ಏಕೆ ಹಾಗೆ ವಿವಸ್ತ್ರಗಳಾಗಿ ನಡೆದುಕೊಂಡು ಹೋಗುತ್ತಿದ್ದಳು ಎಂದು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಘಟನೆ ನಡೆದ ಸರಾಯ್‌ಕೇಳ ವ್ಯಾಪ್ತಿಯ ಸಬ್‌-ಇನ್ಸ್‌ಪೆಕ್ಟರ್‌ ಮೊಹಮ್ಮದ್ ನೌಶದ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...