alex Certify ಸ್ವ ಪಕ್ಷದವರಿಂದಲೇ ಬಿಜೆಪಿ ಶಾಸಕನಿಗೆ ಮುಜುಗರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವ ಪಕ್ಷದವರಿಂದಲೇ ಬಿಜೆಪಿ ಶಾಸಕನಿಗೆ ಮುಜುಗರ..!

ಕಾರವಾರ- ಹೊನ್ನಾವರ ವಿಧಾನಸಭಾಕ್ಷೇತ್ರದ ಶಾಸಕ ಸುನೀಲ ನಾಯ್ಕ್ ಹೊನ್ನಾವರ ತಾಲೂಕಿನ ಕೋಟೆಬೈಲ್‌ ನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸುನೀಲ್ ಭಾಗಿಯಾಗುತ್ತಿದ್ದಂತೆ ಅವರದೇ ಪಕ್ಷದ ಅಂದರೆ ಬಿಜೆಪಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ.

ಈ ಜಿಲ್ಲೆಯ ಮುಟ್ಟಾ ಗ್ರಾಮದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ರಸ್ತೆಗಳೆಲ್ಲಾ ಹದಗೆಟ್ಟು ಹೋಗಿವೆಯಂತೆ. ಹೀಗಾಗಿ ಕಾಮಗಾರಿ ಆಗಿಲ್ಲ ಅಂತ ಇದೇ ಗ್ರಾಮದ ಒಂದಿಷ್ಟು ಜನ ಕಪ್ಪು ಭಾವುಟ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕಪ್ಪು ಭಾವುಟವನ್ನು ಸುಮಾರು ಹೊತ್ತು ಪ್ರದರ್ಶನ ಮಾಡಿದ್ದಾರೆ. ಈ ವೇಳೆ ಶಾಸಕರ ಬೆಂಬಲಿಗರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ‌ ನಡೆದಿದೆ.

ಇನ್ನು ಈ ವಿಚಾರವಾಗಿ ವೇದಿಕೆ ಮೇಲೆ ಮಾತನಾಡಿದ ಶಾಸಕ ಸುನೀಲ್, ಹೀಗೆ ಭಾವುಟ ಹಿಡಿಯುವ ಬದಲು ಈ ವಿಚಾರ ನನ್ನ ಗಮನಕ್ಕೆ ತರಬಹುದಿತ್ತು. ಕೂಡಲೇ ಈ ಕಾಮಗಾರಿಗಳಿಗೆ ಚಾಲನೆ ನೀಡ್ತೀನಿ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ಬೆಂಬಲಿಗರಿಂದ ಸಮಸ್ಯೆ ಆಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...