alex Certify ಸ್ವಾದಿಷ್ಟ ಆಲೂ ಪಲಾವ್ ಟ್ರೈ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾದಿಷ್ಟ ಆಲೂ ಪಲಾವ್ ಟ್ರೈ ಮಾಡಿ ನೋಡಿ

ಒಂದೇ ರೀತಿಯ ರೈಸ್ ಬಾತ್‌, ಪಲಾವ್‌ಗಳನ್ನು ತಿಂದು ಬೇಜಾರಾಗಿರುತ್ತದೆ. ರುಚಿಕರವಾದ, ಶೀಘ್ರವಾಗಿ ಮತ್ತು ಸುಲಭವಾಗಿ ತಯಾರಿಸಬಹುದಾದ ಆಲೂ ಪಲಾವ್ ಅನ್ನು ಒಮ್ಮೆ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು

ಚಿಕ್ಕದಾಗಿ ಕತ್ತರಿಸಿದ ಆಲೂ 2
ಜೀರಿಗೆ 1 ಚಮಚ
ಬಾಸುಮತಿ ಅಕ್ಕಿ 1/2 ಕಪ್
ತುಪ್ಪ 2 ಚಮಚ
ಬೆಳ್ಳುಳ್ಳಿ 1
ಪಲಾವ್ ಎಲೆ 1
ಉಪ್ಪು ರುಚಿಗೆ ತಕ್ಕಷ್ಟು
ಏಲಕ್ಕಿ 1
ದಾಲ್ಚಿನ್ನಿ ಸ್ವಲ್ಪ
ಶುಂಠಿ ಪೇಸ್ಟ್ 1 ಚಮಚ
ಪುದೀನ ಎಲೆ 4-5
ಹಸಿಮೆಣಸು 2
ಕೊತ್ತಂಬರಿ ಸ್ವಲ್ಪ
ಕೆಂಪು ಮೆಣಸಿನ ಪುಡಿ 1/2 ಚಮಚ
ತೆಂಗಿನ ತುರಿ ಸ್ವಲ್ಪ
ಹುಣಸೆ ಹಣ್ಣಿನ ರಸ 1 ಚಮಚ
ನೀರು 3 ಕಪ್

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಅಕ್ಕಿಯನ್ನು ತೊಳೆದು ಪಕ್ಕಕ್ಕಿಡಿ. ನಂತರ ತೆಂಗಿನ ತುರಿ, ಕೊತ್ತಂಬರಿ, ಹುಣಸೆ ರಸ , ಬೆಳ್ಳುಳ್ಳಿ, ಏಲಕ್ಕಿ, ಡಾಲ್ಚಿನ್ನಿ, ಪುದೀನ ಎಲೆಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

ತದನಂತರ ಕುಕ್ಕರ್ ಅನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಸಿದ್ಧಪಡಿಸಿದ ಪೇಸ್ಟ್, ಜೀರಿಗೆ, ಶುಂಠಿ ಪೇಸ್ಟ್, ಪಲಾವ್ ಎಲೆ ಹಾಕಿ ಹುರಿಯಿರಿ. ನಂತರ ಅದರಲ್ಲಿ ಅಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿದು ಬೇಕಾದಷ್ಟು ನೀರು ಹಾಕಿ. ಕತ್ತರಿಸಿದ ಆಲೂಗಡ್ಡೆ, ಮೆಣಸಿನ ಪುಡಿ, ಉಪ್ಪು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವರೆಗೂ ಬೇಯಿಸಿ. ಈಗ ರುಚಿಕರವಾದ ಆಲೂ ಪಲಾವ್ ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...