alex Certify ಸ್ವಂತ ದೇಶ ಕಟ್ಟಲು ದ್ವೀಪ ಖರೀದಿಸಿದ ಭೂಪರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಂತ ದೇಶ ಕಟ್ಟಲು ದ್ವೀಪ ಖರೀದಿಸಿದ ಭೂಪರು….!

ಖಾಸಗಿ ದ್ವೀಪಗಳನ್ನು ಖರೀದಿಸುವುದು ಕೇವಲ ಶ್ರೀಮಂತರು ಮತ್ತು ಪ್ರಸಿದ್ಧರು ಮಾತ್ರವಲ್ಲ. ಸಾಮಾನ್ಯರು ಕೂಡ ಖರೀದಿಸಬಹುದು ಎಂಬುದಕ್ಕೆ ಇವರೇ ಉದಾಹರಣೆ.

ಗರೆಥ್ ಜಾನ್ಸನ್ ಮತ್ತು ಮಾರ್ಷಲ್ ಮೇಯರ್ ಕೆರಿಬಿಯನ್‌ನಲ್ಲಿ ಕ್ರೌಡ್‌ಫಂಡಿಂಗ್ ಮೂಲಕ ಇಡೀ ದ್ವೀಪವನ್ನು ಖರೀದಿಸಿದ್ದಾರೆ. ಅದನ್ನು ತಮ್ಮದೇ ದೇಶವಾಗಿ ಪರಿವರ್ತಿಸುವ ಯೋಜನೆಗಳನ್ನು ಹೊಂದಿದ್ದಾರೆ.

ದ್ವೀಪವನ್ನು ಖರೀದಿಸಲು ಕ್ರೌಡ್‌ಫಂಡ್ ಮಾಡಲು ಪ್ರಾರಂಭವಾದ ಯೋಜನೆಯಾದ ಲೆಟ್ಸ್ ಬೈ ಆನ್ ಐಲ್ಯಾಂಡ್ ಅನ್ನು ಇಬ್ಬರೂ ಸಹ ಸ್ಥಾಪಿಸಿದ್ದಾರೆ.

ಕೆರಿಬಿಯನ್‌ನಲ್ಲಿ ಜನವಸತಿ ಇಲ್ಲದ ದ್ವೀಪವನ್ನು ಖರೀದಿಸಲು ಹೂಡಿಕೆದಾರರ ಮೂಲಕ ಕೇವಲ ಒಂದು ವರ್ಷದಲ್ಲಿ ಡಾಲರ್ 250,000 (ರೂ. 2.5 ಕೋಟಿ) ಸಂಗ್ರಹಿಸಲು ಸಾಧ್ಯವಾಯಿತು. ಅವರು ಪ್ರವಾಸೋದ್ಯಮಕ್ಕಾಗಿ ಪ್ರದೇಶವನ್ನು ಅಭಿವೃದ್ಧಿಪಡಿಸಲು ಬಯಸಿದ್ದು, ಪರಸ್ಪರ ಲಾಭವನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ.

2018ರಲ್ಲಿ ಇವರಿಬ್ಬರಿಗೂ ತಾವೊಂದು ತಮ್ಮದೇ ಆದ ದೇಶ ಹೊಂದಬೇಕು ಅನ್ನೋ ಕನಸು ಚಿಗುರೊಡೆಯುತ್ತದೆ. ಡಿಸೆಂಬರ್ 2019 ರ ಹೊತ್ತಿಗೆ, ದ್ವೀಪ ಖರೀದಿಸಲು ಸಾಕಷ್ಟು ಹಣವನ್ನು ಸಂಗ್ರಹಿಸಿದ್ರು. ಅಂತೂ ಬೆಲೀಜ್ ಕರಾವಳಿಯಲ್ಲಿರುವ ಜನವಸತಿಯಿಲ್ಲದ ದ್ವೀಪವಾದ ಕಾಫಿ ಕಯ್ ಅನ್ನು ಖರೀದಿಸಲು ಯಶಸ್ವಿಯಾಗಿದ್ದಾರೆ.

ಆದರೆ, ದ್ಬೀಪ ಖರೀದಿಯು ಕೇವಲ ವಿನೋದಕ್ಕಾಗಿ ಅಥವಾ ಸಣ್ಣ ಪ್ರವಾಸೋದ್ಯಮ ವ್ಯಾಪಾರಕ್ಕಾಗಿ ಮಾತ್ರವಲ್ಲ. ಗರೆಥ್ ಮತ್ತು ಮೇಯರ್ ರಾಷ್ಟ್ರ ನಿರ್ಮಾಣ ಯೋಜನೆಗಾಗಿ ಹಣವನ್ನು ಹೂಡಿಕೆ ಮಾಡಿದ್ದಾರೆ. ಅದು ತನ್ನದೇ ಆದ ರಾಷ್ಟ್ರಧ್ವಜ, ಗೀತೆ ಮತ್ತು ಸರ್ಕಾರವನ್ನು ಸಹ ಹೊಂದಿರುತ್ತದೆ.

ಕಾಫಿ ಕಯ್ ಅನ್ನು ಈಗಾಗಲೇ ಪ್ರಿನ್ಸಿಪಾಲಿಟಿ ಆಫ್ ಐಲ್ಯಾಂಡಿಯಾ ಎಂದು ಮರುರೂಪಿಸಲಾಗಿದೆ. ಇದು ಅಂತರರಾಷ್ಟ್ರೀಯ ಸಮುದಾಯದಿಂದ ಇನ್ನೂ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲ.

ಕಾಫಿ ಕಯ್ ಬಹಳ ಚಿಕ್ಕದಾದ ಭೂಪ್ರದೇಶವಾಗಿದೆ. ಒಂದು ತುದಿಯಿಂದ ಇನ್ನೊಂದಕ್ಕೆ ನಡೆಯಲು ಕೆಲವೇ ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಆದರೆ ಇದು ಸಮುದ್ರ ಮತ್ತು ಕಡಲತೀರದ ಅದ್ಭುತ ನೋಟಗಳನ್ನು ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...