alex Certify ಸ್ಮಾರ್ಟ್ ವಾಚ್ ಗಳ ಲಿಸ್ಟ್ ಗೆ ಮತ್ತೊಂದು ಬ್ರಾಂಡ್ ಸೇರ್ಪಡೆ..!‌ ಇಲ್ಲಿದೆ ಅದರ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಮಾರ್ಟ್ ವಾಚ್ ಗಳ ಲಿಸ್ಟ್ ಗೆ ಮತ್ತೊಂದು ಬ್ರಾಂಡ್ ಸೇರ್ಪಡೆ..!‌ ಇಲ್ಲಿದೆ ಅದರ ವಿಶೇಷತೆ

ಇತ್ತೀಚಿನ ದಿನಮಾನಗಳಲ್ಲಿ ಸ್ಮಾರ್ಟ್ ವಾಚ್ ಗಳತ್ತ ಜನ ವಾಲಿದ್ದಾರೆ. ಕಡಿಮೆ ದರದಲ್ಲೂ ಸ್ಮಾರ್ಟ್ ವಾಚ್ ಗಳು ಸಿಕ್ತಾ ಇವೆ. ದುಬಾರಿ ಸ್ಮಾರ್ಟ್ ವಾಚ್ ಗಳು ಕೂಡ ಲಭ್ಯ ಇವೆ.

ಫಿಟ್ಮೆಸ್ ಗಾಗಿಯೇ ಅನೇಕರು ಈ ರೀತಿಯ ವಾಚ್ ಗಳನ್ನು ಖರೀದಿ ಮಾಡ್ತಾ ಇದ್ದಾರೆ. ಈ ಪೈಕಿ ಇದೀಗ ಮತ್ತೊಂದು ಬ್ರಾಂಡ್ ಸ್ಮಾರ್ಟ್ ವಾಚ್ ಸೇರ್ಪಡೆಯಾಗಿದೆ.

ಹೌದು, ಇಷ್ಟು ದಿನ ಆಡಿಯೋ ಉತ್ಪನ್ನಗಳನ್ನು ನೀಡುತ್ತಿದ್ದ ಭಾರತದ ಸ್ವದೇಶಿ ಕಂಪೆನಿ ಮಿವಿ ಇದೀಗ ಸ್ಮಾರ್ಟ್ ವಾಚ್‍ ಗಳನ್ನು ಗ್ರಾಹಕರಿಗೆ ನೀಡಲು ತಯಾರಾಗಿದೆ.

ಸ್ವದೇಶಿ ಉತ್ಪನ್ನವಾದ ಮಾಡೆಲ್‍ ಇ ಹೆಸರಿನ ಹೊಸ ವಾಚನ್ನು ಬಿಡುಗಡೆ ಮಾಡಿದೆ ಈ ಕಂಪನಿ. ಈ ವಾಚ್ ಅನೇಕ ವೈಶಿಷ್ಯತೆ ಹೊಂದಿದೆ. ಸುಮಾರು 1.69 ಇಂಚಿನ ಚೌಕಾಕಾರದ ಎಚ್‍ಡಿ ಪರದೆ ಹೊಂದಿದೆ. 500 ನಿಟ್ಸ್ ಬ್ರೈಟ್‍ನೆಸ್‍ ಇದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 7 ದಿನಗಳವರೆಗೆ ಬ್ಯಾಟರಿ ಬರಲಿದೆ.

ಮತ್ತೊಂದು ವಿಶೇಷ ಅಂದರೆ ಫಿಟ್ ನೆಸ್ ಮಾಹಿತಿಯನ್ನೂ ಇದು ನೀಡುತ್ತದೆ. ಸೈಕ್ಲಿಂಗ್‍, ಜಾಗಿಂಗ್‍, ನಡಿಗೆ, ಯೋಗ ಆಟ, ವ್ಯಾಯಾಮ ಸೇರಿದಂತೆ 120 ಮೋಡ್‍ಗಳನ್ನು ಒಳಗೊಂಡಿದೆ.

ನೀರು ಮತ್ತು ಧೂಳು ನಿರೋಧಕಕ್ಕಾಗಿ ಐಪಿ 68 ರೇಟಿಂಗ್‍ ಹೊಂದಿದೆ. ಸುಮಾರು 28 ಭಾಷೆಗಳನ್ನು ಬೆಂಬಲಿಸಲಿದೆಯಂತೆ ಈ ವಾಚ್.

ಇನ್ನು ಈ ವಾಚ್ ಗುಲಾಬಿ, ನೀಲಿ, ಕೆಂಪು, ಬೂದು, ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇದರ ಬೆಲೆ ಕೂಡ ಕೈಗೆಟಕುವ ದರದಲ್ಲಿ ಇದೆ. ಸದ್ಯ ಇದು ಫ್ಲಿಪ್‍ಕಾರ್ಟ್‍ ನಲ್ಲಿ ಮಾತ್ರ ಲಭ್ಯವಿದ್ದು, ದರ 1,499 ರೂಪಾಯಿ ಆಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...