alex Certify ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಹಂಸ ನಂದಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟಿ ಹಂಸ ನಂದಿನಿ

ನಟಿ ಹಂಸ ನಂದಿನಿ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ಕುರಿತು ಅವರೇ ಅಧಿಕೃತವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೇ, ಬೋಳು ತಲೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಇದಕ್ಕೆ ಅಭಿಮಾನಿಗಳು ತುಂಬಾ ನೋವು ವ್ಯಕ್ತಪಡಿಸುತ್ತಿದ್ದಾರೆ. ಕ್ಯಾನ್ಸರ್ ಗೆದ್ದು ಮತ್ತೆ ಬಣ್ಣ ಹಚ್ಚಿ ನಮ್ಮನ್ನು ರಂಜಿಸಿರಿ ಎಂದು ಅಭಿಮಾನಿಗಳು ಧೈರ್ಯ ತುಂಬುವಂತಹ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

ನನಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ. ನಾನು ಇನ್ನೂ ಹಲವು ಶಸ್ತ್ರಚಿಕಿತ್ಸೆ ಒಳಪಡಬೇಕಾಗಿದೆ ಎಂದು ಹಂಸ ನಂದಿನಿ ಹೇಳಿದ್ದಾರೆ.

ಸೂರ್ಯನ ಕಿರಣದಿಂದ ದೂರವಾಗಲಿದೆ ಈ ರೋಗ

ಈಗಾಗಲೇ ಅವರು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದಾರೆ. ಇನ್ನೂ ಹಲವು ಬಾರಿ ಈ ಥೆರಪಿಗೆ ಒಳಗಾಗಬೇಕಿದೆ. ಅಲ್ಲದೇ, ಸದ್ಯ ಅವರ ಒಂದು ಸ್ತನಕ್ಕೆ ಮಾತ್ರ ಕ್ಯಾನ್ಸರ್ ಹಬ್ಬಿದ್ದು, ಇನ್ನೊಂದು ಸ್ತನಕ್ಕೂ ಹಬ್ಬವು ಸಾಧ್ಯತೆ ದಟ್ಟವಾಗಿದೆ ಎಂದು ವೈದ್ಯರು ಹೇಳಿದ್ದಾರಂತೆ. ಹೀಗಾಗಿ ನಟಿ ಕ್ಯಾನ್ಸರ್ ಗೆ ನಾನು ಬಲಿಪಶುವಾಗಲು ಇಷ್ಟಪಡುವುದಿಲ್ಲ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

ಹಂಸ ನಂದಿನಿ ಪತಂ ಚಿತ್ರದಲ್ಲಿ 2018ರಲ್ಲಿ ನಟಿಸಿದ್ದೇ ಕೊನೆಯ ಚಿತ್ರವಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ ಅವರು ಬಣ್ಣ ಹಚ್ಚಿರಲಿಲ್ಲ. ಹೀಗಾಗಿ ಅಭಿಮಾನಿಗಳು ಅವರನ್ನು ಪ್ರಶ್ನಿಸುತ್ತಿದ್ದರು. ಸದ್ಯ ಈ ಪ್ರಶ್ನೆಗಳಿಗೆ ನಟಿ ಉತ್ತರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...