alex Certify ಸ್ಟ್ರಾಬೆರಿ ಸವಿಯುವ ಮುನ್ನ ಇದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಟ್ರಾಬೆರಿ ಸವಿಯುವ ಮುನ್ನ ಇದು ತಿಳಿದಿರಲಿ

Strawberries may reduce gut inflammation

ಸ್ಟ್ರಾಬೆರಿ ಜಗತ್ತಿನಾದ್ಯಂತ ಸಖತ್ ಫೇಮಸ್ ಆಗಿರೋ ಹಣ್ಣು. ಚಾಕಲೇಟ್ ಗೆ ಸಿಕ್ಕಾಪಟ್ಟೆ ಪೈಪೋಟಿ ಕೊಡ್ತಾ ಇದೆ. ಯಾಕಂದ್ರೆ ಮಕ್ಕಳಿಗೆಲ್ಲ ಸ್ಟ್ರಾಬೆರಿ ಫ್ಲೇವರ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ.

ಆದ್ರೆ ಸ್ಟ್ರಾಬೆರಿ ಸೇವನೆ ಸೇಫಲ್ಲ. ಯಾಕಂದ್ರೆ ಈ ಹಣ್ಣಿನಲ್ಲಿ ಕ್ರಿಮಿನಾಶಕಗಳು ಹಾಗೇ ಉಳಿದುಕೊಂಡುಬಿಡುತ್ತವೆ ಅನ್ನೋದು ಸಂಶೋಧನೆಯಲ್ಲಿ ಸಾಬೀತಾಗಿದೆ.

ಸಂಶೋಧನೆಯ ಪ್ರಕಾರ ಕ್ರಿಮಿನಾಶಕಗಳು ಮಾನವರಿಗೆ ಅತ್ಯಂತ ವಿಷಕಾರಿ. ಅವು ನಮ್ಮ ಸಂತಾನೋತ್ಪತ್ತಿ, ಇಮ್ಯೂನ್ ಸಿಸ್ಟಂ ಹಾಗೂ ನರ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತವೆ, ಕ್ಯಾನ್ಸರ್ ಗೂ ಕಾರಣವಾಗುತ್ತವೆ.

48 ಬಗೆಯ ಹಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವುಗಳ ಪೈಕಿ ಸ್ಟ್ರಾಬೆರಿಯಲ್ಲಿ ಕ್ರಿಮಿನಾಶಕದ ಪ್ರಮಾಣ ಅತ್ಯಧಿಕವಾಗಿದೆ. ಸ್ವೀಟ್ ಕಾರ್ನ್ ಮತ್ತು ಅವೊಕಾಡೋಗಳಲ್ಲಿ ಕೀಟನಾಶಕಗಳ ಪ್ರಮಾಣ ಅತ್ಯಂತ ಕಡಿಮೆ ಇತ್ತು. ಸ್ಟ್ರಾಬೆರಿಯಲ್ಲಿ ಸುಮಾರು 20 ಬಗೆಯ ಕ್ರಿಮಿನಾಶಕಗಳು ಪತ್ತೆಯಾಗಿವೆ. ಪಾಲಕ್ ಸೊಪ್ಪು, ಸ್ಟ್ರಾಬೆರಿ ನಂತರದ ಸ್ಥಾನದಲ್ಲಿದೆ. ಅವನ್ನು ತೊಳೆದು ಸ್ವಚ್ಛಗೊಳಿಸಿದ್ರೂ ಕೀಟನಾಶಕಗಳ ಅಪಾಯ ಇದ್ದೇ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...