alex Certify ʼಸ್ಕ್ರಾಂಬಲ್ಡ್ ಎಗ್ʼ ಮಾಡಿ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಕ್ರಾಂಬಲ್ಡ್ ಎಗ್ʼ ಮಾಡಿ ಸವಿಯಿರಿ

ಮೊಟ್ಟೆಯಿಂದ ಮೊಟ್ಟೆ ಮಸಾಲಾ, ಮೊಟ್ಟೆ ಫ್ರೈ, ಆಮ್ಲೇಟ್ ಮಾಡುತ್ತೇವೆ. ಇಲ್ಲಿ ಸಂಜೆ ಸಮಯಕ್ಕೆ ಸ್ನ್ಯಾಕ್ಸ್ ಆಗುವಂತಹ ರುಚಿಕರವಾದ ಸ್ಕ್ರಾಂಬಲ್ ಎಗ್ ಮಾಡುವ ವಿಧಾನ ಇದೆ. ತಿನ್ನುವುದಕ್ಕೆ ಸಖತ್ ರುಚಿಕರವಾಗಿರುತ್ತದೆ ಇದು.

4 ಮೊಟ್ಟೆ, ½ ಕಪ್ ಹಾಲು. 1 ಟೀ ಸ್ಪೂನ್- ಉಪ್ಪು, 1 ಟೀ ಸ್ಪೂನ್-ಕಾಳುಮೆಣಸಿನ ಪುಡಿ,
ಮೊದಲಿಗೆ ಒಂದು ದೊಡ್ಡ ಬೌಲ್ ತೆಗೆದುಕೊಳ್ಳಿ. ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 5 ನಿಮಿಷಗಳ ಕಾಲ ಚೆನ್ನಾಗಿ ಕೈಬಿಡದೇ ಬೀಟ್ ಮಾಡಿಕೊಳ್ಳಿ. ಎಗ್ ಜಾಸ್ತಿ ಹೊತ್ತು ಬೀಟ್ ಮಾಡಿದಷ್ಟು ಇದು ಚೆನ್ನಾಗಿ ಆಗುತ್ತದೆ.

BIG NEWS: ಬಿಟ್ ಕಾಯಿನ್ ಕೇಸ್ ನಲ್ಲಿ ಬಿಜೆಪಿ ಪ್ರಭಾವಿಗಳು ಭಾಗಿ ಎಂದ ಸಿದ್ದರಾಮಯ್ಯ; ಪ್ರಕರಣವನ್ನು ನಾವೇ ಇಡಿ, ಸಿಬಿಐ ಗೆ ವಹಿಸಿದ್ದೇವೆ ಎಂದ ಸಿಎಂ

ನಂತರ ಹಾಲು ಸೇರಿಸಿ ಮತ್ತೊಮ್ಮೆ ಬೀಟ್ ಮಾಡಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದು ತುಸು ಬಿಸಿಯಾಗುತ್ತಲೆ ಮೊಟ್ಟೆ ಮಿಶ್ರಣ ಹಾಕಿ. ಸಣ್ಣ ಉರಿಯಲ್ಲಿ ಇದನ್ನು ಚೆನ್ನಾಗಿ ಬೇಯಿಸಿಕೊಳ್ಳಿ. ಒಂದು ಸೌಟಿನ ಸಹಾಯದಿಂದ ಇದನ್ನು ನಿಧಾನಕ್ಕೆ ಮಿಕ್ಸ್ ಮಾಡಿಕೊಂಡು ಒಂದು ಪ್ಲೇಟ್ ಗೆ ಹಾಕಿಕೊಳ್ಳಿ. ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಉದುರಿಸಿಕೊಂಡು ಸರ್ವ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...