alex Certify ಸೌಂದರ್ಯ ಇಮ್ಮಡಿಗೊಳಿಸಲು ಇಲ್ಲಿವೆ ಸರಳ ಸಲಹೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ಇಮ್ಮಡಿಗೊಳಿಸಲು ಇಲ್ಲಿವೆ ಸರಳ ಸಲಹೆಗಳು

ಸುಂದರವಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ. ಚರ್ಮದ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕೆಂದರೆ ಈ ಸಲಹೆಗಳನ್ನು ಪಾಲಿಸಿ. ಇದರಿಂದ ಸೌಂದರ್ಯ ಇಮ್ಮಡಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

* ಪ್ರತಿದಿನ ಸ್ವಲ್ಪ ತುಳಸಿ ರಸವನ್ನು ಜೇನುತುಪ್ಪದೊಡನೆ ಸೇವಿಸುತ್ತಿದ್ದರೆ, ಮುಖದ ತೇಜಸ್ಸು ಹೆಚ್ಚುತ್ತದೆ. ಅಲ್ಲದೆ ಮುಖದ ಮೇಲಿನ ಕಲೆಗಳೂ ಕೂಡ ಮಾಯವಾಗುತ್ತದೆ.

* ಕಹಿ ಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತುಸು ಉಗುರು ಬೆಚ್ಚಗಿರುವಾಗಲೇ ಮುಖ ತೊಳೆದುಕೊಳ್ಳುತ್ತಿದ್ದರೆ, ಸೌಂದರ್ಯ ವೃದ್ಧಿಸುತ್ತದೆ. ಅಲ್ಲದೆ ಸಿಡಿಬಿನ ಕಲೆಗಳು ಮಾಯವಾಗುತ್ತವೆ.

* ಹಸಿ ಹಾಲನ್ನು ಮುಖ, ಕೈ, ಕಾಲು ಮತ್ತು ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ನಂತರ ಸ್ನಾನ ಮಾಡಿದರೆ ನ್ಯಾಚುರಲ್ ಕಂಡೀಶನರ್‌ನಂತೆ ಕೆಲಸ ಮಾಡುತ್ತದೆ ಮತ್ತು ಮುಖ ಹಾಗೂ ಕೂದಲಿನ ಹೊಳಪನ್ನು ಕಾಯ್ದಿರಿಸಿ ಸೌಂದರ್ಯ ಹೆಚ್ಚಲು ಸಹಕಾರಿಯಾಗುತ್ತದೆ.

* ದಾಲ್ಚಿನಿ ಚಕ್ಕೆಗಳನ್ನು ಪುಡಿ ಮಾಡಿ ನಿಂಬೆರಸ ಸೇರಿಸಿ ಹಚ್ಚಿಕೊಂಡರೆ ಮೊಡವೆಗಳು ಮಾಯವಾಗುತ್ತದೆ.

* ಕಡಲೇ ಹಿಟ್ಟಿಗೆ ಸೌತೆ ರಸ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ. ಪ್ರತಿನಿತ್ಯ ಈ ರೀತಿ ಮಾಡಿದರೆ ತ್ವಚೆ ನುಣುಪು ಹಾಗೂ ಕೋಮಲತೆ ಪಡೆಯುತ್ತದೆ.

* ಸೌತೆಕಾಯಿಯನ್ನು ಅತಿ ತೆಳುವಾಗಿ ಕತ್ತರಿಸಿ, ಅವುಗಳನ್ನು 10 ನಿಮಿಷ ಕಣ್ಣಿನ ರೆಪ್ಪೆ ಮೇಲೆ ಇಟ್ಟುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪುವೃತ್ತ ಮಾಯವಾಗುತ್ತದೆ.

* ಟೊಮ್ಯಾಟೋ ಕತ್ತರಿಸಿ ಪ್ರತಿದಿನ ಮುಖದ ಮೇಲೆ ತಿಕ್ಕುವುದರಿಂದ ತ್ವಚೆ ಹೊಳಪು ಪಡೆಯುತ್ತದೆ.

* ಹಾಲಿನ ಕೆನೆಯನ್ನು ಪ್ರತಿದಿನ ಮುಖಕ್ಕೆ ಹಚ್ಚಿಕೊಳ್ಳುತ್ತಿದ್ದರೆ ತ್ವಚೆ ಮೃದುವಾಗುತ್ತದೆ ಅಲ್ಲದೆ ನಂಜುನಿರೋಧಕ ಶಕ್ತಿ ಪಡೆಯುತ್ತದೆ. ಜೊತೆಗೆ ಕಪ್ಪು ಕಲೆ ಹಾಗೂ ನೆರಿಗೆಗಳು ಮಾಯವಾಗುತ್ತದೆ.

* ಪಪ್ಪಾಯಿ ಸಿಪ್ಪೆಯಿಂದ ನಿಯಮಿತವಾಗಿ ಉಜ್ಜಿಕೊಳ್ಳುತ್ತಿದ್ದರೆ ಮಚ್ಚೆಗಳು ನಿವಾರಣೆಯಾಗುತ್ತದೆ.

* ಪ್ರತಿದಿನ ಊಟದ ನಂತರ ಸೇಬುಹಣ್ಣನ್ನು ತಿನ್ನುವುದರಿಂದ ಹಲ್ಲುಗಳು ಹೊಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...