alex Certify ‘ಸೌಂದರ್ಯ’ ಇಮ್ಮಡಿಗೊಳಿಸುವ ಸುಂದರ ಕೂದಲ ರಕ್ಷಣೆಗೆ ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೌಂದರ್ಯ’ ಇಮ್ಮಡಿಗೊಳಿಸುವ ಸುಂದರ ಕೂದಲ ರಕ್ಷಣೆಗೆ ಇಲ್ಲಿದೆ ಟಿಪ್ಸ್

ಬೇಸಿಗೆಯ ಉರಿ, ತ್ವಚೆಯ ಮೇಲೆ ಮಾತ್ರವಲ್ಲ, ಕೂದಲಿನ ಮೇಲೂ ಭಾರೀ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಬೆವರು ಮತ್ತು ಧೂಳು ಸಂಗ್ರಹವಾಗುವುದನ್ನು ತಡೆಯಲು ಮತ್ತೆ ಮತ್ತೆ ತೊಳೆಯುವ ಪರಿಣಾಮ ನೆತ್ತಿಯ ಹೊರ ಪದರ ಒಣಗಿ ಹೊಟ್ಟು ರೂಪದಲ್ಲಿ ಕಾಡುತ್ತದೆ. ಇದನ್ನು ದೂರ ಮಾಡಲು ಕರ್ಪೂರ ಬಳಸಬಹುದು.

ಕರ್ಪೂರ ಅಸಾಧಾರಣ ತಂಪುಗೊಳಿಸುವ ಮತ್ತು ಶಮನಕಾರಿ ಗುಣಗಳನ್ನು ಹೊಂದಿದ್ದು, ಉರಿ ಮತ್ತು ತುರಿಕೆಯ ಸಮಸ್ಯೆಯನ್ನು ಶಮನಗೊಳಿಸುತ್ತದೆ. ಇದರಿಂದ ತಲೆಹೊಟ್ಟು ಕಡಿಮೆಯಾಗುತ್ತದೆ. ಕರ್ಪೂರದ ಎಣ್ಣೆ ಬಳಸುವ ಮೂಲಕ ನೀವು ಉದ್ದನೆಯ ಕೂದಲನ್ನು ಪಡೆಯಬಹುದು. ಶಾಂಪೂ ಅಥವಾ ಕೇಶತೈಲಗಳ ಬದಲು ಇದು ಉತ್ತಮ ಪರಿಣಾಮವನ್ನು ಬೀರುತ್ತದೆ.

3 ಚಮಚ ಕರ್ಪೂರದ ಎಣ್ಣೆಗೆ ಒಂದು ಚಮಚ ಮೊಸರು, ಒಂದು ಮೊಟ್ಟೆ ಸೇರಿಸಿ. ತಲೆ ಸ್ನಾನ ಮಾಡುವ ಒಂದು ಗಂಟೆ ಮೊದಲು ಕೂದಲಿನ ಬುಡದವರೆಗೆ ಹಚ್ಚಿಕೊಳ್ಳಿ. ನಯವಾಗಿ ಮಸಾಜ್ ಮಾಡಿ. ಒಂದು ಗಂಟೆ ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ.

ಇದಕ್ಕೆ ಆಲಿವ್ ಆಯಿಲ್ ಬೆರೆಸಿದರೆ ಕೂದಲಿಗೆ ಮತ್ತಷ್ಟು ಶಕ್ತಿ ಸಿಗುತ್ತದೆ. ಕರ್ಪೂರದ ಎಣ್ಣೆಯಷ್ಟೇ ಪ್ರಮಾಣದ ಅಲಿವ್ ಅಯಿಲ್ ಬೆರೆಸಿ ಮಸಾಜ್ ಮಾಡಿದರೆ ಕೂದಲು ನೀಳವಾಗಿಯೂ, ಬಲಿಷ್ಠವಾಗಿಯೂ ಬೆಳೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...