alex Certify ‘ಸೋಶಿಯಲ್ ಮೀಡಿಯಾ’ ದಲ್ಲಿ ಟ್ರೆಂಡ್ ಆಯ್ತು ಚೆಸ್ ಒಲಂಪಿಯಾಡ್ ಉದ್ಘಾಟನೆ ವೇಳೆ ಮೋದಿ ಧರಿಸಿದ್ದ ಉಡುಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೋಶಿಯಲ್ ಮೀಡಿಯಾ’ ದಲ್ಲಿ ಟ್ರೆಂಡ್ ಆಯ್ತು ಚೆಸ್ ಒಲಂಪಿಯಾಡ್ ಉದ್ಘಾಟನೆ ವೇಳೆ ಮೋದಿ ಧರಿಸಿದ್ದ ಉಡುಗೆ…!

ಭಾರತದಲ್ಲಿ ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಟೂರ್ನಿ ನಡೆಯುತ್ತಿದ್ದು, ಗುರುವಾರದಂದು ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಮಹಾಬಲಿಪುರಂನಲ್ಲಿ ಇದಕ್ಕೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ನರೇಂದ್ರ ಮೋದಿಯವರು ತೊಟ್ಟಿದ್ದ ಪಂಚೆ ಮತ್ತು ಶಾಲ್ ಮೇಲೆ ಚೆಸ್ ಬೋರ್ಡ್ ಮಾದರಿಯಲ್ಲಿ ಬಿಳಿ ಮತ್ತು ಕಪ್ಪು ಚೌಕಗಳು ಇದ್ದು, ಈ ಉದ್ಘಾಟನಾ ಕಾರ್ಯಕ್ರಮಕ್ಕೆ ಪೂರಕವಾದಂತಿತ್ತು.

ಯಾವುದೇ ಸಮಾರಂಭಕ್ಕೆ ಹೋದರೂ ಸಹ ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ಪೂರಕವಾಗುವಂತಹ ಉಡುಗೆಗಳನ್ನು ಧರಿಸುತ್ತಾರೆ. ಈ ಹಿಂದೆಯೂ ಅವರು ಧರಿಸಿದ್ದ ಉಡುಗೆಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹಾಗೆಯೇ ಈ ಫೋಟೋ ಕೂಡ ಈಗ ಎಲ್ಲರ ಗಮನ ಸೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...