alex Certify ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ರಾಧೆ ಶ್ಯಾಮ್​ ಚಿತ್ರದ ಟ್ರೇಲರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ರಾಧೆ ಶ್ಯಾಮ್​ ಚಿತ್ರದ ಟ್ರೇಲರ್​

ಬಾಹುಬಲಿ ಸ್ಟಾರ್​ ಪ್ರಭಾಸ್​ ಹಾಗೂ ನಟಿ ಪೂಜಾ ಹೆಗ್ಡೆ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್​​ನ ಟ್ರೇಲರ್​ ರಿಲೀಸ್​ ಆಗಿದೆ. 1 ನಿಮಿಷ 8 ಸೆಕೆಂಡ್​ಗಳ ಟ್ರೇಲರ್​ನಲ್ಲಿ ಪ್ರೀತಿಯ ಮ್ಯಾಜಿಕ್​ನ್ನು ರಾಧೆ ಶ್ಯಾಮ್​ ಚಿತ್ರತಂಡ ಬಹಳ ಅಚ್ಚುಕಟ್ಟಾಗಿ ತೋರಿಸಿದೆ. ರಾಧಾ ಕೃಷ್ಣ ಕುಮಾರ್​ ನಿರ್ದೇಶನದ ಈ ಸಿನಿಮಾವು ಮಾರ್ಚ್ 11ರಂದು ತೆರೆಗಪ್ಪಳಿಸಲಿದೆ.

ಇದೊಂದು ವೈಜ್ಞಾನಿಕ ಕಾಲ್ಪನಿಕ ಕತೆಯಾಗಿದ್ದು 1970ರ ಕಾಲಘಟ್ಟದಲ್ಲಿ ಯುರೋಪ್​ನಲ್ಲಿ ನಡೆಯುವ ಕತೆ ಇದಾಗಿದೆ, ಈ ಸಿನಿಮಾದಲ್ಲಿ ಭಾಗ್ಯಶ್ರೀ, ಕೃಷ್ಣಂ ರಾಜು, ಸಚಿನ್​ ಖೇಡೇಕರ್​ ಹಾಗೂ ಪ್ರಿಯದರ್ಶಿ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾವನ್ನು ಯುವಿ ಕ್ರಿಯೇಷನ್ಸ್, ಗೋಪಿ ಕೃಷ್ಣ ಮೂವೀಸ್ ಮತ್ತು ಟಿ-ಸೀರೀಸ್ ನಿರ್ಮಿಸಿದೆ.

Telugu: https://t.co/GtqETZ0LEU
Hindi: https://t.co/ZbEim6I4hB
Tamil: https://t.co/NYsfK0rF2F
Kannada: https://t.co/oSMUUE2uBY
Malayalam: https://t.co/vwT1NpfsNJ pic.twitter.com/YCk8oUICXJ

— UV Creations (@UV_Creations) March 2, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...