alex Certify ಸೋಮಾರಿಗಳಿಗೆ ಈ ಕಂಪನಿ ನೀಡ್ತಿದೆ ಭರ್ಜರಿ ಆಫರ್‌, ಜೊತೆಗಿವೆ ಎರಡು ಷರತ್ತುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಮಾರಿಗಳಿಗೆ ಈ ಕಂಪನಿ ನೀಡ್ತಿದೆ ಭರ್ಜರಿ ಆಫರ್‌, ಜೊತೆಗಿವೆ ಎರಡು ಷರತ್ತುಗಳು

ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಉದ್ಯೋಗ ಜಾಹೀರಾತಿಗೆ ಸಂಬಂಧಪಟ್ಟ ಫೋಟೋ ಇದು. ಈ ಜಾಹೀರಾತಿನಲ್ಲಿರೋ ಎರಡು ಷರತ್ತುಗಳನ್ನು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಅಷ್ಟಕ್ಕೂ ಅಲ್ಲೇನಿದೆ ಗೊತ್ತಾ? ಕೆಲಸಕ್ಕೆ ಸಿಬ್ಬಂದಿ ಬೇಕಾಗಿದ್ದಾರೆ ಎಂದು ದೊಡ್ಡದಾಗಿ ಬರೆಯಲಾಗಿದೆ.

ಆ ಕೆಲಸಕ್ಕೆ ಅರ್ಜಿ ಹಾಕಲು ಇಚ್ಛಿಸುವವರು ಆಲಸಿಗಳಾಗಿರಬೇಕು. ಪ್ರಸ್ತುತ ಇರುವ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ಸೋಮಾರಿಗಳೇ ಬೇಕು ಅಂತಾ ಬರೆಯಲಾಗಿದೆ. ನಿಮ್ಮ CV ಜೊತೆಗೆ ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿ ಎಂಬ ಬರಹದ ಜೊತೆಗೆ ಸಂದರ್ಶನಕ್ಕೆ ಬರುವ ಮುನ್ನ ಸ್ನಾನ ಮಾಡಿಯೇ ಬನ್ನಿ ಎಂಬ ಷರತ್ತನ್ನು ಹಾಕಲಾಗಿದೆ.

ಇದನ್ನು ಓದಿದ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಈ ಜಾಹೀರಾತು ಕೇವಲ ತಮಾಷೆಗೆ ಹಾಕಿದ್ದಾ? ಅಥವಾ ನಿಜವಾದ ಜಾಹೀರಾತಾ ಅನ್ನೋದು ಸ್ಪಷ್ಟವಾಗಿಲ್ಲ. ಜಾಹೀರಾತಿನ ಈ ಫೋಟೋ ಟ್ವಿಟ್ಟರ್‌ನಲ್ಲಿ ಹರಿದಾಡ್ತಾ ಇದೆ ಸಾವಿರಾರು ಜನರು ಇದನ್ನು ಲೈಕ್‌ ಮತ್ತು ರಿಟ್ವೀಟ್‌ ಮಾಡಿದ್ದಾರೆ. ತಮ್ಮ ಸ್ನೇಹಿತರಿಗೆ ಟ್ಯಾಗ್‌ ಕೂಡ ಮಾಡಿದ್ದಾರೆ.

ಇನ್ನು ಈ ಜಾಹೀರಾತಿನ ಬಗ್ಗೆ ಬಗೆ ಬಗೆಯ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ. ಸೋಮಾರಿಗಳಿಗೆ ಜಾಹೀರಾತು ಸಖತ್‌ ಇಷ್ಟವಾಗಿದ್ರೆ, ಇನ್ನು ಉಳಿದವರಿಗೆ ತಮಾಷೆಯ ವಸ್ತುವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...