alex Certify ಸೋನು ಸೂದ್‌ ರಿಂದ ಮತ್ತೊಂದು ಮಹತ್ತರ ಕಾರ್ಯ: ಹುಟ್ಟೂರಿನ 1000 ಹೆಣ್ಣು ಮಕ್ಕಳಿಗೆ ಸೈಕಲ್‌ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು ಸೂದ್‌ ರಿಂದ ಮತ್ತೊಂದು ಮಹತ್ತರ ಕಾರ್ಯ: ಹುಟ್ಟೂರಿನ 1000 ಹೆಣ್ಣು ಮಕ್ಕಳಿಗೆ ಸೈಕಲ್‌ ವಿತರಣೆ

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಲಾಕ್​ಡೌನ್​ ಜಾರಿಯಾದಾಗಿನಿಂದ ಅನೇಕ ಜನರ ಪಾಲಿಗೆ ರಿಯಲ್​ ಲೈಫ್​ ಹಿರೋ ಎನಿಸಿರುವ ಬಾಲಿವುಡ್​ ನಟ ಸೋನುಸೂದ್​ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಸುದ್ದಿಯಾಗುತ್ತಲೇ ಇದ್ದಾರೆ. 2020ರಿಂದ ಸಮಾಜ ಸೇವೆಯನ್ನು ಮಾಡುತ್ತಲೇ ಬಂದಿರುವ ಸೋನು ಸೂದ್​ ಈಗಲೂ ಕೂಡ ತಮ್ಮ ಮಾನವೀಯ ಕಾರ್ಯವನ್ನು ಮುಂದುವರಿಸುತ್ತಲೇ ಇದ್ದಾರೆ.

ಈ ಬಾರಿ ನಟ ಸೋನು ಸೂದ್​ ತಮ್ಮ ಹುಟ್ಟೂರು ಮೊಗಾದ ಜನತೆಗೆ ನೆರವಾಗಿದ್ದಾರೆ. ಸೋನು ತಮ್ಮ ಸಹೋದರಿ ಮಾಳಾವಿಕಾ ಸೂದ್​ ಸಾಚಾರ್​ ಜೊತೆ ಸೇರಿ ಮೊಗಾ ಕಿ ಬೆಟಿ ಎಂಬ ಯೋಜನೆಯ ಹೆಸರಿನಲ್ಲಿ ಕನಿಷ್ಟ 1000 ಕುಟುಂಬಗಳಿಗೆ ನೆರವಾಗಿದ್ದಾರೆ. ಸೋನು ಸೂದ್​ ಹಾಗೂ ಅವರ ಸಹೋದರಿ ಸೇರಿ ಈ ಭಾಗದ ಸರಿ ಸುಮಾರು 40 ರಿಂದ 45 ಹಳ್ಳಿಗಳ ಶಾಲಾ ಬಾಲಕಿಯರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ 1000 ಬೈಸಿಕಲ್​ಗಳನ್ನು ಉಚಿತವಾಗಿ ನೀಡಿದ್ದಾರೆ.

ಈ ಹೊಸ ಯೋಜನೆಯ ಬಗ್ಗೆ ಮಾತನಾಡಿದ ಸೋನು ಸೂದ್​, ಇಲ್ಲಿನ ಮಕ್ಕಳಿಗೆ ಶಾಲೆಗಳಿಗೆ ತೆರಳಬೇಕು ಅಂದರೆ ಸಾಕಷ್ಟು ದೂರ ಕ್ರಮಿಸಬೇಕು. ಕೊರೆಯುವ ಚಳಿಯಲ್ಲಿ ಮಕ್ಕಳಿಗೆ ಬಹುಬೇಗನೇ ಶಾಲೆಗೆ ತೆರಳುವುದು ತುಂಬಾನೇ ಕಷ್ಟಕರವಾಗಿದೆ. ಮಕ್ಕಳ ಈ ಕಷ್ಟವು ನಮ್ಮ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ನಾವು 8 ರಿಂದ 12 ನೇ ತರಗತಿಯ ಹೆಣ್ಣು ಮಕ್ಕಳಿಗೆ ಉಚಿತವಾಗಿ ಬೈಸಿಕಲ್​ ನೀಡಿದ್ದೇವೆ ಎಂದು ಹೇಳಿದರು. ಯಾವ ಮಕ್ಕಳಿಗೆ ಸೈಕಲ್​ನ ಅವಶ್ಯಕತೆ ಇದೆ ಎಂಬುದನ್ನು ಸರ್ಕಾರಿ ಶಾಲೆಯ ಶಿಕ್ಷಕರೇ ಪಟ್ಟಿ ಮಾಡಿ ನಮಗೆ ನೀಡಿದ್ದರು ಎಂದೂ ಸೋನು ಇದೇ ವೇಳೆ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...