alex Certify ಸೊಸೆ ಹಾದಿಯನ್ನೇ ತುಳಿಯುತ್ತಾರಾ ಶಿವಪಾಲ್​ ಯಾದವ್​..? ಕುತೂಹಲ ಮೂಡಿಸಿದ ಯುಪಿ ಸಿಎಂ ಜೊತೆಗಿನ ಭೇಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಸೆ ಹಾದಿಯನ್ನೇ ತುಳಿಯುತ್ತಾರಾ ಶಿವಪಾಲ್​ ಯಾದವ್​..? ಕುತೂಹಲ ಮೂಡಿಸಿದ ಯುಪಿ ಸಿಎಂ ಜೊತೆಗಿನ ಭೇಟಿ

ಶಿವಪಾಲ್​ ಹಾಗೂ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಮತ್ತು ಸೋದರಳಿಯ ಅಖಿಲೇಶ್​ ಯಾದವ್​​ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಗತಿಶೀಲ ಸಮಾಜವಾದಿ ಪಕ್ಷದ ಶಿವಪಾಲ್​ ಯಾದವ್​​​​ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​ರನ್ನು ಲಕ್ನೋದಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಶಿವಪಾಲ್ ಸೊಸೆ ಅಪರ್ಣಾ ಯಾದವ್​ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಶಿವಪಾಲ್​ ಕೂಡ ಸೊಸೆಯ ಹಾದಿಯನ್ನೇ ತುಳಿಯುತ್ತಾರಾ..? ಎಂಬ ಅನುಮಾನ ಮೂಡಿದೆ.

ಶಿವಪಾಲ್​ ಯಾದವ್​ ಹಾಗೂ ಯೋಗಿ ಆದಿತ್ಯನಾಥ್​ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಶಿವಪಾಲ್ ಯಾದವ್​ ಆಕ್ರೋಶ ಹೊರ ಹಾಕಿದ ನಾಲ್ಕು ದಿನಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...