
ಸಂಜೆ ಹೊತ್ತು ಮೈ ಮರೆತು ಕಿಟಕಿ ಬಾಗಿಲು ಸರಿಯಾದ ಸಮಯದಲ್ಲಿ ಮುಚ್ಚದೆ ಹೋದರೆ ನಮ್ಮ ಮನೆಯೇ ಸೊಳ್ಳೆಗಳ ಸಾಮ್ರಾಜ್ಯವಾಗುತ್ತದೆ.
ರಾತ್ರಿ ಹೊತ್ತು ನೆಮ್ಮದಿಯಾಗಿ ಮಲಗಲು ಬಿಡದ ಸೊಳ್ಳೆಗಳ ಹಾವಳಿಗೆ ಮಾರುಕಟ್ಟೆಯಲ್ಲಿ ಹಲವು ರಾಸಾಯನಿಕ ಔಷಧಿಗಳುಂಟು. ಆದರೆ ಇವ್ಯಾವುದೂ ಪರಿಸರ ಸ್ನೇಹಿಯೂ ಅಲ್ಲ, ದೇಹಕ್ಕೆ ಹಿತವೂ ಅಲ್ಲ.
ನಿದ್ದೆಗೆಡಿಸಿ ಕಂಗಾಲಾಗಿಸುವ ಸೊಳ್ಳೆಗಳಿಗೆ ಮನೆಯಲ್ಲೇ ಇದೆ ದಿವ್ಯೌಷಧಿ…! ಹೌದು, ದೇವರ ಮನೆಯಲ್ಲಿರುವ ಕರ್ಪೂರದ ಬಿಲ್ಲೆ ಸೊಳ್ಳೆಗಳನ್ನು ಹೇಳ ಹೆಸರಲ್ಲದಂತೆ ಮಾಯವಾಗಿಸಿಬಿಡುತ್ತದೆ.
ಸೊಳ್ಳೆ ಓಡಿಸಲು ಬಳಸುವ ರಿಪೆಲೆಂಟ್ ಗಳಲ್ಲಿ ಕರ್ಪೂರದ ಬಿಲ್ಲೆಗಳನ್ನು ಹಾಕಿ ಸ್ವಿಚ್ ಒತ್ತಿ. ಕ್ಷಣ ಮಾತ್ರದಲ್ಲಿ ಕರ್ಪೂರ ಕರಗಿ ಅದರ ಪರಿಮಳ ಮನೆತುಂಬಾ ಹರಡಿಕೊಳ್ಳುವಾಗಲೇ ಸೊಳ್ಳೆಗಳು ಓಡಿ ಹೋಗುತ್ತವೆ.