alex Certify ಸೈಕ್ಲಿಂಗ್ ಮಾಡುವಾಗ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದ ನಟಿ ನರ್ಗಿಸ್ ಫಕ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಕ್ಲಿಂಗ್ ಮಾಡುವಾಗ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದ ನಟಿ ನರ್ಗಿಸ್ ಫಕ್ರಿ

ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಯುಕೆಯಲ್ಲಿ ಸೈಕ್ಲಿಂಗ್ ಮಾಡುವಾಗ ಮರದ ಬೇಲಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ.

ಇತ್ತೀಚೆಗೆ ಕೇನ್ಸ್ ಚಲನಚಿತ್ರೋತ್ಸವದ 75ನೇ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ನರ್ಗಿಸ್ ಫಕ್ರಿ, ತನ್ನ ಸ್ನೇಹಿತನೊಂದಿಗೆ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫಾರ್ಮ್‌ಹೌಸ್‌ನಲ್ಲಿ ಉಳಿದಿಕೊಂಡಿದ್ದ ನರ್ಗಿಸ್ ಫಕ್ರಿ ಸೈಕ್ಲಿಂಗ್ ಮಾಡಿದ್ದಾರೆ. ಈ ವೇಳೆ ಆಕೆಯ ಸ್ನೇಹಿತ ಇದನ್ನು ಚಿತ್ರೀಕರಿಸಿದ್ದಾರೆ. ನರ್ಗೀಸ್ ಹಿಂತಿರುಗಿ ನೋಡಿದಾಗ, ಆಕೆಯ ಸೈಕಲ್ ರಸ್ತೆಯಿಂದ ಸ್ಕಿಡ್ ಆಗಿ ಮರದ ಬೇಲಿ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ನರ್ಗಿಸ್ ಫಕ್ರಿ ಜೋರಾಗಿ ನಕ್ಕಿದ್ದಾರೆ. ಈ ಫೋಟೋ ಅಭಿಮಾನಿಗಳ ಮನಗೆದ್ದಿದೆ.

2011 ರಲ್ಲಿ ರಣಬೀರ್ ಕಪೂರ್ ಜೊತೆ ‘ರಾಕ್‌ಸ್ಟಾರ್’ ಚಿತ್ರದ ಮೂಲಕ ನರ್ಗಿಸ್ ಫಕ್ರಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು ಮದ್ರಾಸ್ ಕೆಫೆ, ಮೇನ್ ತೇರಾ ಹೀರೋ, ಅಜರ್ ಮತ್ತು ಹೌಸ್‌ಫುಲ್-3 ನಂತಹ ಚಿತ್ರಗಳಿಗಾಗಿ ಹೆಸರುವಾಸಿಯಾಗಿದ್ದಾರೆ.

ನರ್ಗೀಸ್ ಕೊನೆಯದಾಗಿ ಸಂಜಯ್ ದತ್ ಜೊತೆ ನಟಿಸಿದ ತೋರ್ಬಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು ಓಟಿಟಿಯಲ್ಲಿ ಬಿಡುಗಡೆಯಾಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...