alex Certify ಸುಲಭವಾಗಿ ಮಾಡಿ ‘ಮೊಮೊಸ್ʼ ಚಟ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ‘ಮೊಮೊಸ್ʼ ಚಟ್ನಿ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ಸವಿಯಬೇಕು ಅನಿಸುತ್ತದೆ. ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ ಮೊಮೊಸ್ ಟ್ರೈ ಮಾಡಿ. ಆದರೆ ಈ ಮೊಮೊಸ್ ಸವಿಯಲು ರುಚಿಕರವಾದ ಚಟ್ನಿ ಇದ್ದರೆ ಮಾತ್ರ ಇದರ ರುಚಿ ಹೆಚ್ಚುತ್ತದೆ. ಇಲ್ಲಿದೆ ನೋಡಿ ಸುಲಭವಾಗಿ ರುಚಿಕರವಾಗಿ ಮಾಡಬಹುದಾದ ಮೊಮೊಸ್ ಚಟ್ನಿ.

ಬೇಕಾಗುವ ಸಾಮಗ್ರಿಗಳು:

ಬೆಳ್ಳುಳ್ಲಿ ಎಸಳು-12, ಒಣಮೆಣಸು-5, ವಿನೇಗರ್-2 ಟೇಬಲ್ ಸ್ಪೂನ್, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-1/2 ಟೀ ಸ್ಪೂನ್.

ಮಾಡುವ ವಿಧಾನ:

ಒಣಮೆಣಸನ್ನು ಹದ ಬಿಸಿನೀರಿನಲ್ಲಿ 1 ಗಂಟೆಗಳ ಕಾಲ ನೆನೆಸಿಡಿ. ನಂತರ ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಅದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ನಂತರ ಇದಕ್ಕೆ ನೆನೆಸಿಟ್ಟ ಒಣಮೆಣಸು, ಸಕ್ಕರೆ, ವಿನೇಗರ್ ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮೊಮೊಸ್ ಜತೆಗೆ ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...