alex Certify ಸುಲಭವಾಗಿ ಮಾಡಬಹುದು ಕಸ್ಟರ್ಡ್ ಫ್ರೂಟ್ ಸಲಾಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಬಹುದು ಕಸ್ಟರ್ಡ್ ಫ್ರೂಟ್ ಸಲಾಡ್

ಮನೆಯಲ್ಲಿ ಹಣ್ಣು ತಂದಿದ್ದು ಜಾಸ್ತಿ ಇದ್ದರೆ ಅಥವಾ ಏನಾದರೂ ತಂಪಾಗಿರುವುದು ತಿನ್ನಬೇಕು ಅನಿಸಿದಾಗ ಈ ಕಸ್ಟರ್ಡ್ ಫ್ರೂಟ್ ಸಲಾಡ್ ಮಾಡಿಕೊಂಡು ತಿನ್ನಿ. ಮಾಡುವುದಕ್ಕೂ ಸುಲಭ.

ಬೇಕಾಗುವ ಸಾಮಗ್ರಿಗಳು:

2 ಕಪ್ ಹಾಲು, 3 ಟೇಬಲ್ ಸ್ಪೂನ್-ಕಸ್ಟರ್ಡ್ ಪುಡಿ, ¼ ಕಪ್-ಹಾಲು, ¼ ಕಪ್-ಸಕ್ಕರೆ, ¾ ಕಪ್- ಮಾವಿನಹಣ್ಣಿನ ಹೋಳು, 3 ಟೇಬಲ್ ಸ್ಪೂನ್-ದಾಳಿಂಬೆ ಹಣ್ಣಿನ ಬೀಜ, 6-ದ್ರಾಕ್ಷಿ ಸಣ್ಣಗೆ ಹಚ್ಚಿದ್ದು, ¼ ಕಪ್-ಸೇಬು ಹಣ್ಣಿನ ಹೋಳು, 2 ಟೇಬಲ್-ಬಾದಾಮಿ, 2 ಟೇಬಲ್ ಸ್ಪೂನ್-ಪಿಸ್ತಾ, ¼ ಟೀ ಸ್ಪೂನ್-ಏಲಕ್ಕಿ ಪುಡಿ.

ಮಾಡುವ ವಿಧಾನ:

ಒಂದು ಅಗಲವಾದ ಬಾಣಲೆಯಲ್ಲಿ 2 ಕಪ್ ಹಾಲು ಹಾಕಿ ಕುದಿಸಿ. ನಂತರ ಒಂದು ಬೌಲ್ ಗೆ ¼ ಕಪ್ ಹಾಲು ಹಾಕಿ ಕಸ್ಟರ್ಡ್ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಕುದಿಸಿದ ಹಾಲಿಗೆ ಹಾಕಿ ಚೆನ್ನಾಗಿ ಕೈಯಾಡಿಸಿ.

ನಂತರ ಸಕ್ಕರೆ ಸೇರಿಸಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ ಗ್ಯಾಸ್ ಆಫ್ ಮಾಡಿ. ನಂತರ ಈ ಮಿಶ್ರಣ ತಣ್ಣಗಾದ ಮೇಲೆ ಮಾವಿನಹಣ್ಣು, ಡ್ರೈ ಫ್ರೂಟ್ಸ್, ದಾಳಿಂಬೆ, ದ್ರಾಕ್ಷಿ, ಸೇಬುಹಣ್ಣು, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಫ್ರಿಡ್ಜ್ ನಲ್ಲಿ 1 ಗಂಟೆಗಳ ಕಾಲ ಇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...