alex Certify ‘ಸುರಕ್ಷತಾ ಸಾಮಗ್ರಿ’ ಇಲ್ಲದೇ ಕಡಿದಾದ ಪರ್ವತ ಏರಿದ ಸನ್ಯಾಸಿ; ಹಳೆ ವಿಡಿಯೋ ಮತ್ತೆ ನೋಡಿ ಬೆರಗಾದ ನೆಟ್ಟಿಗರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸುರಕ್ಷತಾ ಸಾಮಗ್ರಿ’ ಇಲ್ಲದೇ ಕಡಿದಾದ ಪರ್ವತ ಏರಿದ ಸನ್ಯಾಸಿ; ಹಳೆ ವಿಡಿಯೋ ಮತ್ತೆ ನೋಡಿ ಬೆರಗಾದ ನೆಟ್ಟಿಗರು…!

ಸನ್ಯಾಸಿಯೊಬ್ಬರು ಕಡಿದಾದ ಪರ್ವತವನ್ನು ಏರುತ್ತಿರುವ ಹಳೆಯ ವಿಡಿಯೊ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ವಿಡಿಯೊದಲ್ಲಿ ಆ ಸನ್ಯಾಸಿಯ ಸಾಹಸ ಆಶ್ಚರ್ಯವೆನಿಸುತ್ತದೆ. ಅವರು ಯಾವುದೇ ಸುರಕ್ಷತಾ ಸಾಮಗ್ರಿ ಬಳಸದೇ ಪರ್ವತ ಏರುವುದನ್ನು ನೋಡಬಹುದು. ಈ ವಿಡಿಯೋವನ್ನು ತನ್ಸು ಯೆಗೆನ್​ ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದು 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ಸನ್ಯಾಸಿ ಏರಿಹೋದ ಪಕ್ಕದಲ್ಲೇ ಮಹಿಳೆಯೊಬ್ಬರು ಸುರಕ್ಷತಾ ಸರಂಜಾಮುಗಳೊಂದಿಗೆ ಪರ್ವತ ಏರಲು ಪ್ರಯತ್ನಿಸುತ್ತಾ ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಆ ಸನ್ಯಾಸಿ ಸ್ವಲ್ಪ ಸೆಕೆಂಡುಗಳಲ್ಲಿ ಸಲೀಸಾಗಿ ಮೇಲಕ್ಕೆ ಹೋಗುವುದನ್ನು ತೋರಿಸುತ್ತದೆ.

ಇದು ಕಡಿದಾದ ಪರ್ವತವಾಗಿದ್ದರಿಂದ ವಿಡಿಯೋ ಗಮನಿಸಿದವರಿಗೆ ಆಶ್ಚರ್ಯ ಎನಿಸುತ್ತದೆ. ಆ ಮಹಿಳೆ ತನ್ನ ದಾರಿಯಲ್ಲಿ ಸಾಗಲು ಹೆಣಗಾಡುತ್ತಿರುವಾಗ ಯಾವುದೇ ಸಹಾಯವಿಲ್ಲದೆ ಪರ್ವತವನ್ನು ಅನಾಯಾಸವಾಗಿ ಏರುವ ವ್ಯಕ್ತಿಯ ಧೈರ್ಯ ಮೆಚ್ಚುವಂಥದ್ದು.

ನೆಟ್ಟಿಗರು ಈ ವಿಡಿಯೋಗೆ ಕಾಮೆಂಟ್​ ಮಾಡಿದ್ದು, ಧ್ಯಾನ ಮತ್ತು ಯೋಗವು ಸನ್ಯಾಸಿಗೆ ನೆರವಾಗಿದೆ ಎಂದು ಭಾವಿಸಿದ್ದೇನೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...